ಬೆಂಗಳೂರು ಮೂಲದ ಎಲೆಕ್ಟ್ರಾನಿಕ್ ವಾಹನಗಳ ಉತ್ಪಾದಕ ಸಿಂಪಲ್ ಎನರ್ಜಿ ತನ್ನ ಮೊಟ್ಟ ಮೊದಲ ಇ-ಸ್ಕೂಟರ್ ಅನ್ನು ದೇಶದ 13 ರಾಜ್ಯಗಳಲ್ಲಿ ಪರಿಚಯಿಸಿದೆ. ಇದೀಗ ದ್ವಿಚಕ್ರ ವಾಹನದಿಂದ ನಾಲ್ಕು ಚಕ್ರದ ಇವಿ ವಾಹನದ ಉತ್ಪಾದನೆಯತ್ತ ಚಿತ್ತ ನೆಟ್ಟಿದೆ ಸಿಂಪಲ್ ಎನರ್ಜಿ.
“ಬಹುವಿಧಗಳತ್ತ ಗಮನ ನೆಟ್ಟಿರುವ ನಾವು ಮುಂದಿನ ದಿನಗಳಲ್ಲಿ ನಾಲ್ಕು ಚಕ್ರಗಳ ವಾಹನಗಳ ಉತ್ಪಾದನೆಗೆ ಯೋಜನೆ ಸಿದ್ಧಪಡಿಸಿಟ್ಟುಕೊಂಡಿದ್ದೇವೆ. ಈ ಸಂಬಂಧ ದೂದೃಷ್ಟಿಯೊಂದನ್ನು ಹೊಂದಿರುವ ನಾವು ನಮ್ಮ ಸಂಶೋಧನೆ & ಅಭಿವೃದ್ಧಿ ಕೆಲಸವನ್ನು ಇನ್ನಷ್ಟು ಚುರುಕುಗೊಳಿಸುತ್ತಿದ್ದೇವೆ” ಎಂದು ಸಿಂಪಲ್ ಎನರ್ಜಿ ಸಂಸ್ಥಾಪಕ ಹಾಗೂ ಸಿಇಓ ಸುಹಾಸ್ ರಾಜ್‌ಕುಮಾರ್ ತಿಳಿಸಿದ್ದಾರೆ.
ದ್ವಿಚಕ್ರ ವಾಹನ ಸವಾರರಿಗೆ ಭರ್ಜರಿ ಗುಡ್ ನ್ಯೂಸ್: ಈ ವಾಹನಗಳಿಗೆ ಪರವಾನಿಗೆ ಅಗತ್ಯವಿಲ್ಲ
ತನ್ನದೇ ಸ್ವಂತ ಮೋಟರ್ ಹಾಗೂ ಬ್ಯಾಟರಿಗಳನ್ನು ಅಭಿವೃದ್ಧಿಪಡಿಸಿರುವ ಸಿಂಪಲ್ ಎನರ್ಜಿ, ಸದ್ಯ ಸ್ಕೂಟರ್ ಉತ್ಪಾದನೆಯತ್ತ ಗಮನ ಕೊಡುತ್ತಿದ್ದು, ತಮಿಳುನಾಡಿನ ಹೊಸೂರಿನಲ್ಲಿ ಸ್ಥಾಪಿಸಲಾಗುತ್ತಿರುವ ತನ್ನ ಘಟಕದಲ್ಲಿ ವರ್ಷಕ್ಕೆ ಒಂದು ದಶಲಕ್ಷ ಸ್ಕೂಟರ್ ಗಳ ಉತ್ಪಾದನೆಗೆ ಕಂಪನಿ ಚಿತ್ತ ನೆಟ್ಟಿದೆ ಎಂದಿದೆ.