ವಜ್ರ ಅಂದ್ರೆ ಯಾರಿಗೆ ಇಷ್ಟವಿಲ್ಲ. ಪ್ರತಿಯೊಬ್ಬರು ತಮ್ಮ ಬಳಿ ವಜ್ರ ಇರಲೆಂದು ಬಯಸ್ತಾರೆ. ಆದ್ರೆ ಬಡವರ ಕೈಗೆಟುಕದ ವಸ್ತು ಅದು. ವಜ್ರ ಹೊಂದಿರುವವರು ಶ್ರೀಮಂತರು ಎಂದೇ ಅರ್ಥ. ವಜ್ರಕ್ಕೆ ಹೋಲಿಸಿದ್ರೆ ಬೆಳ್ಳಿ ಬೆಲೆ ಕಡಿಮೆ.
ಆದ್ರೆ ವಜ್ರ ಮಾಡದ ಕೆಲಸವನ್ನು ಬೆಳ್ಳಿ ಮಾಡುತ್ತದೆ. ಮನೆಯಲ್ಲಿರುವ ಬೆಳ್ಳಿ ವಸ್ತುವಿಗೆ ಮನುಷ್ಯನ ಅದೃಷ್ಟವನ್ನು ಬದಲಿಸುವ ಶಕ್ತಿ ಇದೆ.
ಜ್ಯೋತಿಷ್ಯದ ಪ್ರಕಾರ ಬೆಳ್ಳಿಯ ಮೇಲೆ ಚಂದ್ರ ಹಾಗೂ ಶುಕ್ರ ಅಧಿಪತ್ಯ ಸಾಧಿಸಿದ್ದಾರೆ. ಯಾವ ವ್ಯಕ್ತಿ ಬೆಳ್ಳಿ ವಸ್ತುಗಳನ್ನು ಬಳಸ್ತಾನೋ ಆ ವ್ಯಕ್ತಿಯ ಜಾತಕದಲ್ಲಿ ಚಂದ್ರ ಹಾಗೂ ಶುಕ್ರ ಪ್ರಬಲರಾಗ್ತಾರೆ.
ಭಾವೋದ್ರಿಕ್ತ ವ್ಯಕ್ತಿಗಳು ಬೆಳ್ಳಿಯನ್ನು ಜಾಗರೂಕರಾಗಿ ಬಳಸಬೇಕು. ಕರ್ಕ, ವೃಶ್ಚಿಕ, ಮೀನ ರಾಶಿಯವರಿಗೆ ಬೆಳ್ಳಿ ಶುಭ ಪರಿಣಾಮ ನೀಡುತ್ತದೆ. ಮೇಷ, ಸಿಂಹ ಮತ್ತು ಧನು ರಾಶಿಯವರಿಗೆ ಬೆಳ್ಳಿ ಒಳ್ಳೆಯದಲ್ಲ. ಉಳಿದ ರಾಶಿಯವರಿಗೆ ಸಾಮಾನ್ಯ ಪರಿಣಾಮ ಬೀರುತ್ತದೆ.
ಮನೆಯಲ್ಲಿ ಬೆಳ್ಳಿ ಪಾತ್ರೆ ಇದ್ದರೆ ಅದು ಸುಖ, ಶಾಂತಿ ನೀಡುತ್ತದೆ. ಧನ-ಸಂಪತ್ತು ಕೂಡ ನಿರಂತರವಾಗಿ ಹೆಚ್ಚಳವಾಗುತ್ತದೆ.
ಬೆಳ್ಳಿ ಪಾತ್ರೆಯಲ್ಲಿ ಆಹಾರ ಸೇವನೆ ಮಾಡುವುದು ತನು, ಮನ, ಧನಕ್ಕೆ ಬಹಳ ಒಳ್ಳೆಯದು. ಇದು ದೇಹಕ್ಕೆ ತಂಪು ನೀಡಿ ಶರೀರದ ಉಷ್ಣತೆಯನ್ನು ಕಡಿಮೆ ಮಾಡುತ್ತದೆ.
ಎಷ್ಟೇ ಕಷ್ಟಪಟ್ಟರೂ ಫಲಿತಾಂಶ ಸಿಗದಿದ್ದಲ್ಲಿ ಬೆಳ್ಳಿ ನಾಣ್ಯವನ್ನು ಸದಾ ನಿಮ್ಮ ಪರ್ಸ್ ನಲ್ಲಿಟ್ಟುಕೊಳ್ಳಿ.
ವ್ಯಾಪಾರದಲ್ಲಿ ಲಾಭ ಸಿಗುತ್ತಿಲ್ಲವಾದ್ರೆ ಮನೆಯಿಂದ ಹೊರಗೆ ಹೋಗುವ ಮೊದಲು ಬೆಳ್ಳಿಯ ಸಣ್ಣ ಆನೆಯನ್ನು ಜೊತೆಯಲ್ಲಿಟ್ಟುಕೊಂಡು ಹೋಗಿ.