ಬೆಳ್ಳಿಯನ್ನ, ಹಿಂದೂ ಧರ್ಮದಲ್ಲಿ ಶುದ್ಧ ಮತ್ತು ಪರಿಣಾಮಕಾರಿ ಲೋಹ ಎಂದು ವಿವರಿಸಲಾಗಿದೆ. ಬೆಳ್ಳಿಯನ್ನು ಆಭರಣಗಳಿಗೆ ಮಾತ್ರವಲ್ಲ, ಗ್ರಹ ದೋಷಗಳ ನಿವಾರಣೆಗೆ, ವೈವಾಹಿಕ ಜೀವನವನ್ನು ಸುಧಾರಿಸಲು, ಸಂತೋಷ ಹಾಗೂ ಮನಸ್ಸನ್ನು ಚುರುಕಾಗಿಡಲು ಬಳಸಲಾಗುತ್ತದೆ.
ಬೆಳ್ಳಿ ಧರಿಸುವುದರಿಂದ, ವ್ಯಕ್ತಿಯ ದೇಹದಲ್ಲಿ ಇರುವ ನೀರಿನ ಅಂಶ ಸಮತೋಲಕ್ಕೆ ಬರುತ್ತದೆ. ದೇಹದ ಉಷ್ಣತೆ ನಿಯಂತ್ರಣದಲ್ಲಿರುತ್ತದೆ. ಚಂದ್ರ ಮತ್ತು ಶುಕ್ರನ ಪ್ರಭಾವ ಹೆಚ್ಚಾಗಿ ಗ್ರಹದೋಷ ಕಡಿಮೆಯಾಗುತ್ತದೆ.
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಬೆಳ್ಳಿ ಸರ ಧರಿಸುವುದ್ರಿಂದ, ಹಾರ್ಮೋನುಗಳಿಗೆ ಸಂಬಂಧಿಸಿದ ಸಮಸ್ಯೆ ಕೊನೆಗೊಳ್ಳುತ್ತದೆ. ಇದು ವ್ಯಕ್ತಿಯನ್ನು ರೋಮ್ಯಾಂಟಿಕ್ ಗೊಳಿಸುತ್ತದೆ. ವೈವಾಹಿಕ ಜೀವನ ಕೂಡ ಉತ್ತಮಗೊಳ್ಳುತ್ತದೆ. ಶೀತ ಮತ್ತು ಜ್ವರದ ಬಗ್ಗೆ ಆಗಾಗ್ಗೆ ದೂರು ನೀಡುವ ಜನರು ಕುತ್ತಿಗೆಯ ಬದಲಿಗೆ ಕೈಗೆ ಬೆಳ್ಳಿ ಚೈನ್ ಧರಿಸಬೇಕು.
ಶುದ್ಧವಾದ ಬೆಳ್ಳಿ, ವಾತ, ಪಿತ್ತ ಮತ್ತು ಕಫವನ್ನು ನಿಯಂತ್ರಿಸುತ್ತದೆ. ವ್ಯಕ್ತಿಯ ಆರೋಗ್ಯ ಸುಧಾರಿಸುತ್ತದೆ. ಜೇಬಿನಲ್ಲಿ ಚೌಕಾಕಾರದ ಬೆಳ್ಳಿಯನ್ನು ಇಟ್ಟುಕೊಂಡರೆ, ಜೀವನದಲ್ಲಿ ಪ್ರಗತಿ ಸಿಗುತ್ತದೆ. ಪ್ರತಿ ಕ್ಷೇತ್ರದಲ್ಲೂ ಯಶಸ್ಸು ಸಿಗುತ್ತದೆ.
ಶುಕ್ರ ದುರ್ಬಲನಾದ್ರೆ ಮಕ್ಕಳ ಸಂತೋಷಕ್ಕೆ ಅಡ್ಡಿಯಾಗುತ್ತದೆ. ಬೆಳ್ಳಿ ಈ ಸಮಸ್ಯೆಗೆ ಪರಿಹಾರ ನೀಡುತ್ತದೆ. ಬೆಳ್ಳಿಯ ತಂತಿಯನ್ನು ಬಿಸಿ ಮಾಡಿ ತಣ್ಣನೆಯ ಹಾಲಿನಲ್ಲಿ ಹಾಕಿ ತಂತಿಯನ್ನು ತಣ್ಣಗಾಗಲು ಬಿಡಿ. ನಂತರ ಆ ಹಾಲನ್ನು ಕುಡಿಯಿರಿ. ಈ ನಿಯಮವನ್ನು 40 ದಿನಗಳವರೆಗೆ ಮಾಡುವುದರಿಂದ ಶುಕ್ರನು ಬಲಶಾಲಿಯಾಗುತ್ತಾನೆ.
ಜೀವನವನ್ನು ರೋಮ್ಯಾಂಟಿಕ್ ಮಾಡಲು, ಬೆಳ್ಳಿ ಪಾತ್ರೆಗಳಲ್ಲಿ ಆಹಾರವನ್ನು ಸೇವನೆ ಮಾಡಬೇಕು. ಇದನ್ನು ಎಲ್ಲರೂ ಮಾಡಲು ಸಾಧ್ಯವಿಲ್ಲ. ಬಟ್ಟಲ ಬದಲು ಚಮಚ, ಗ್ಲಾಸ್ ಇತ್ಯಾದಿಗಳನ್ನು ಬಳಸಬಹುದು. ಬೆಳ್ಳಿ ಪಾತ್ರೆಗಳು ಯಾವಾಗಲೂ ಬ್ಯಾಕ್ಟೀರಿಯಾ ಮುಕ್ತವಾಗಿರುತ್ತವೆ. ಆದ್ದರಿಂದ, ಅಂತಹ ಪಾತ್ರೆಯಲ್ಲಿ ಆಹಾರವನ್ನು ತಿನ್ನುವುದರಿಂದ ಆರೋಗ್ಯ ಉತ್ತಮವಾಗಿರುತ್ತದೆ.