ಪೊಲೀಸ್ ಸಿಬ್ಬಂದಿಯೊಬ್ಬ ತನ್ನ ಮೂವರು ಸಹೋದ್ಯೋಗಿಗಳನ್ನೇ ಹತ್ಯೆ ಮಾಡಿ ತನ್ನ ಕೋಪ ತಾಪ ಪ್ರದರ್ಶಿಸಿದ ಘಟನೆ ನಡೆದಿದೆ.
ಸಿಕ್ಕಿಂನ ಹೈದರ್ಪುರದ ನೀರು ಶುದ್ಧೀಕರಣ ಘಟಕದಲ್ಲಿ ನಿಯೋಜನೆಗೊಂಡಿದ್ದ 32 ವರ್ಷದ ಪೊಲೀಸ್ ಅಧಿಕಾರಿಯೊಬ್ಬರು ತಮ್ಮ ಪತ್ನಿಯ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಿದ್ದಾರೆಂದು ಆರೋಪಿಸಿ ತನ್ನ ಮೂವರು ಸಹೋದ್ಯೋಗಿಗಳನ್ನು ಗುಂಡು ಹಾರಿಸಿದರು. ಬಳಿಕ ಆರೋಪಿ ಲ್ಯಾನ್ಸ್ ನಾಯಕ್ ಪ್ರಬಿನ್ ರಾಯ್ ಶರಣಾಗಿದ್ದಾನೆ.
ಆರೋಪಿ ಹಾಗೂ ಮೂವರು ಮೃತರು ಸಿಕ್ಕಿಂ ಪೊಲೀಸ್ ಸಿಬ್ಬಂದಿಗಳನ್ನು ಭಾರತೀಯ ರಿಸರ್ವ್ ಬೆಟಾಲಿಯನ್ನ ಭಾಗವಾಗಿ ಸ್ಥಾವರದಲ್ಲಿ ಭದ್ರತೆಗಾಗಿ ನಿಯೋಜಿಸಲಾಗಿತ್ತು.
ಸೋಮವಾರ ಮಧ್ಯಾಹ್ನ 2.30ರ ಸುಮಾರಿಗೆ, ರಾಯ್ ನಿವಾಸದ ಒಳಗೆ ಹೋಗಿ ತನ್ನ ನಾಲ್ವರು ಸಹೋದ್ಯೋಗಿಗಳನ್ನು ಗುರಿಯಾಗಿಸಿಕೊಂಡಿದ್ದಾನೆ. ಅವರು ತಮ್ಮ ರೈಫಲ್ ಬಳಸಿ ಸುಮಾರು ಏಳು-ಎಂಟು ಸುತ್ತುಗಳ ಗುಂಡು ಹಾರಿಸಿದ್ದಾನೆ.
ಮೃತ ಮೂವರಲ್ಲಿ ಇಬ್ಬರು ತಮ್ಮ ಕೊಠಡಿಯೊಳಗೆ ರಕ್ತದ ಮಡುವಿನಲ್ಲಿ ಬಿದ್ದಿದ್ದು, ಮೂರನೇ ವ್ಯಕ್ತಿ ಸ್ನಾನಗೃಹದಲ್ಲಿ ಬಿದ್ದಿರುವುದು ಕಂಡುಬಂದಿದೆ ಎಂದು ದೆಹಲಿ ಪೊಲೀಸ್ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಆರೋಪಿಯು ಮತ್ತೊಬ್ಬ ಸಹೋದ್ಯೋಗಿಗೆ ಗುಂಡು ಹಾರಿಸಲು ಹೊರಟಿದ್ದು, ಆದರೆ ಆತ ಹಿಂಬದಿಯ ಕಿಟಕಿಯಿಂದ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾನೆ.
ಘಟನೆಯ ನಂತರ ಆರೋಪಿಗಳು ಸಮಯಪುರ ಬದ್ಲಿ ಪೊಲೀಸ್ ಠಾಣೆಯಲ್ಲಿ ಶರಣಾಗಿದ್ದಾನೆ. ಕಮಾಂಡರ್ ಪಿಂಟೊ ನಮ್ಗ್ಯಾಲ್ ಭುಟಿಯಾ ಮತ್ತು ಕಾನ್ಸ್ಟೆಬಲ್ಗಳಾದ ಇಂದ್ರ ಲಾಲ್ ಛೆಟ್ರಿ ಮತ್ತು ಧನ್ಹಂಗ್ ಸುಬ್ಬಾ ಮೃತರಾದವರು. ಭುಟಿಯಾ ಮತ್ತು ಛೆಟ್ರಿ ಸ್ಥಳದಲ್ಲೇ ಸಾವನ್ನಪ್ಪಿದರೆ, ಸುಬ್ಬನನ್ನು ಆಸ್ಪತ್ರೆಗೆ ಕರೆತರಲಾದ ನಂತರ ಮೃತರಾದರೆಂದು ಘೋಷಿಸಲಾಯಿತು.
ವಿಶೇಷ ಪೊಲೀಸ್ ಕಮಿಷನರ್ (ಕಾನೂನು ಮತ್ತು ಸುವ್ಯವಸ್ಥೆ) ದೇಪೇಂದ್ರ ಪಾಠಕ್ ಪ್ರಕಾರ, ಮೂವರು ಸಹೋದ್ಯೋಗಿಗಳು ರಾಯ್‌ಗೆ ತನ್ನ ಹೆಂಡತಿಯ ಬಗ್ಗೆ ಅನುಚಿತ ಮಾತುಗಳಾಡಿ ಮಾನಸಿಕ ಕಿರುಕುಳವನ್ನು ಉಂಟುಮಾಡಿದ್ದರೆಂದು ಪ್ರಾಥಮಿಕ ತನಿಖೆಯ ಸಮಯದಲ್ಲಿ ಗೊತ್ತಾಗಿದೆ.
ತನ್ನ ಕುಟುಂಬದಲ್ಲಿ ವೈವಾಹಿಕ ಕಲಹವಿದ್ದು, ಸಹೋದ್ಯೋಗಿಗಳು ಇದರ ಲಾಭ ಪಡೆಯುತ್ತಿದ್ದಾರೆ ಎಂದು ಆತ ತನಿಖಾಧಿಕಾರಿಗಳಿಗೆ ತಿಳಿಸಿದ್ದಾನೆ.
ಸೋಮವಾರ ಮಧ್ಯಾಹ್ನ ಅವನು ತನ್ನ ಹೆಂಡತಿಗೆ ಕರೆ ಮಾಡಿದ್ದು, ಅವಳು ಕರೆ ತೆಗೆದುಕೊಳ್ಳಲಿಲ್ಲ. ಸಹೋದ್ಯೋಗಿಗಳು ಅದನ್ನು ಗೇಲಿ ಮಾಡಿ ಚುಡಾಯಿಸಿದರು. ಇದು ಅವನನ್ನು ಕೆರಳಿಸಿತು. ಸ್ವಲ್ಪ ಸಮಯದ ನಂತರ, ಅವನು ತನ್ನ ರೈಫಲ್ ಎತ್ತಿಕೊಂಡು ಗುಂಡು ಹಾರಿಸಲು ಪ್ರಾರಂಭಿಸಿದನು, ಎಂದು ಇನ್ನೊಬ್ಬ ದೆಹಲಿ ಪೊಲೀಸ್ ಅಧಿಕಾರಿ ಹೇಳಿದರು.