ಗ್ಯಾಂಗ್ ಟಕ್: ಮುಖ್ಯಮಂತ್ರಿ ಪ್ರೇಮ್ ಸಿಂಗ್ ತಮಾಂಗ್ ನೇತೃತ್ವದ ಸಿಕ್ಕಿಂ ಕ್ರಾಂತಿಕಾರಿ ಮೋರ್ಚಾ(SKM) 32 ಸದಸ್ಯರ ವಿಧಾನಸಭೆಯಲ್ಲಿ 31 ಸ್ಥಾನಗಳನ್ನು ಗೆದ್ದುಕೊಂಡು ಸತತ ಎರಡನೇ ಅವಧಿಗೆ ಹಿಮಾಲಯ ರಾಜ್ಯದಲ್ಲಿ ಭಾನುವಾರ ಅಧಿಕಾರವನ್ನು ಉಳಿಸಿಕೊಂಡಿದೆ.
ಸಿಕ್ಕಿಂ ಡೆಮಾಕ್ರಟಿಕ್ ಫ್ರಂಟ್ (SDF) ಕೇವಲ ಒಂದು ಸ್ಥಾನವನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಶ್ಯಾರಿ ಕ್ಷೇತ್ರದಿಂದ ಎಸ್‌ಡಿಎಫ್‌ನ ತೇನ್ಸಿಂಗ್ ನಾರ್ಬು ಲಮ್ತಾ ಅವರು ವಿರೋಧ ಪಕ್ಷದಿಂದ ಚುನಾವಣೆಯಲ್ಲಿ ಗೆದ್ದ ಏಕೈಕ ಅಭ್ಯರ್ಥಿಯಾಗಿದ್ದಾರೆ.
ಎರಡೂ ಸ್ಥಾನಗಳಲ್ಲೂ ಗೆದ್ದ ಮುಖ್ಯಮಂತ್ರಿ ಪ್ರೇಮ್ ಸಿಂಗ್ ತಮಾಂಗ್
ಮುಖ್ಯಮಂತ್ರಿ ಪ್ರೇಮ್ ಸಿಂಗ್ ತಮಾಂಗ್ ಅವರು ತಮ್ಮ ಎರಡೂ ಸ್ಥಾನಗಳನ್ನು ಗೆದ್ದಿದ್ದಾರೆ. ರೆನಾಕ್ ಕ್ಷೇತ್ರದಿಂದ ಮತ್ತು ಸೋರೆಂಗ್ ಚಕುಂಗ್ ಕ್ಷೇತ್ರದಲ್ಲಿ ಜಯಗಳಿಸಿದ್ದಾರೆ. ತಮಾಂಗ್ ಅವರು SDF ನ ಸೋಮ್ ನಾಥ್ ಪೌಡಿಯಾಲ್ ಅವರನ್ನು 7,044 ಮತಗಳಿಂದ ಸೋಲಿಸುವ ಮೂಲಕ ರೆನಾಕ್ ವಿಧಾನಸಭಾ ಸ್ಥಾನವನ್ನು ಪಡೆದರು ಎಂದು EC ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
2019 ರವರೆಗೆ ಸತತ 25 ವರ್ಷಗಳ ಕಾಲ ರಾಜ್ಯವನ್ನು ಆಳಿದ ಸಿಕ್ಕಿಂ ಡೆಮಾಕ್ರಟಿಕ್ ಫ್ರಂಟ್ (SDF) ಕೇವಲ ಒಂದು ಸ್ಥಾನವನ್ನು ಗಳಿಸಿತು.
ಏಪ್ರಿಲ್ 19 ರಂದು ಲೋಕಸಭೆಯ ಮೊದಲ ಹಂತದ ಚುನಾವಣೆಯೊಂದಿಗೆ ಸಿಕ್ಕಿಂ ವಿಧಾನಸಭೆಗೆ ಏಕಕಾಲದಲ್ಲಿ ಚುನಾವಣೆಗಳು ನಡೆದವು.