ನವದೆಹಲಿ: ದೇಶದಲ್ಲಿ ಕೊರೋನಾ ಮೂರನೇ ಅಲೆ ಮಕ್ಕಳ ಮೇಲೆ ಪರಿಣಾಮ ಬೀರಬಹುದೆನ್ನುವ ಹೊತ್ತಲ್ಲೇ ಕೊರೋನಾ ತಡೆಗೆ ಮತ್ತೊಂದು ಅಸ್ತ್ರ ಸಿದ್ಧವಾಗ್ತಿದೆ.
ಈ ವಾರ ಕೊವಾವ್ಯಾಕ್ಸ್ ಲಸಿಕೆಯ ಮೊದಲ ಬ್ಯಾಚ್ ಉತ್ಪಾದನೆ ಮಾಡಲಾಗುತ್ತದೆ. ಮೊದಲ ಬ್ಯಾಚ್ ಉತ್ಪಾದನೆಗೆ ಸಾಕ್ಷಿಯಾಗಲು ಉತ್ಸುಕರಾಗಿದ್ದೇವೆ ಎಂದು ಪುಣೆ ಸಿರಂ ಇನ್ ಸ್ಟಿಟ್ಯೂಟ್ ಸಿಇಒ ಆದಾರ್ ಪೂನಾವಾಲಾ ಹೇಳಿದ್ದು, ಕಂಪನಿಯ ಸಿಬ್ಬಂದಿಯನ್ನು ಅಭಿನಂದಿಸಿದ್ದಾರೆ.
ಅಮೆರಿಕದ ನೋವಾವಾಕ್ಸ್ ಲಸಿಕೆಯನ್ನು ಭಾರತದಲ್ಲಿ ಭಾರತದಲ್ಲಿ ಕೊವಾವ್ಯಾಕ್ಸ್ ಹೆಸರಲ್ಲಿ ಉತ್ಪಾದನೆ ಮಾಡಲಾಗುವುದು. ಪುಣೆಯಲ್ಲಿ ಉತ್ಪಾದಿಸಲಾಗುವ ಈ ಲಸಿಕೆ 18 ವರ್ಷದ ಕೆಳಗಿನವರನ್ನು ರಕ್ಷಿಸುವ ಸಾಮರ್ಥ್ಯ ಹೊಂದಿದೆ ಎಂದು ಆದಾರ್ ಪೂನಾವಾಲಾ ಹೇಳಿದ್ದಾರೆ.