alex Certify ರೋಗದಿಂದ ಮುಕ್ತರಾಗಲು ಭಕ್ತಿಯಿಂದ ಪಾರಾಯಣ ಮಾಡಿ ಶ್ರೀವಿಷ್ಣು ಸಹಸ್ರ ನಾಮ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರೋಗದಿಂದ ಮುಕ್ತರಾಗಲು ಭಕ್ತಿಯಿಂದ ಪಾರಾಯಣ ಮಾಡಿ ಶ್ರೀವಿಷ್ಣು ಸಹಸ್ರ ನಾಮ

ಆರೋಗ್ಯವಂತ ಮನುಷ್ಯನ ಆಯಸ್ಸು ನೂರು ವರ್ಷ. ಈ ನೂರು ವರ್ಷಗಳಲ್ಲಿ ಮುವತ್ತಾರು ಸಾವಿರ ಹಗಲು ಮತ್ತು ಮುವತ್ತಾರು ಸಾವಿರ ರಾತ್ರಿಗಳಿವೆ. ಮನುಷ್ಯನ ದೇಹದಲ್ಲಿ ಎಪ್ಪತ್ತೆರಡು ಸಾವಿರ ನಾಡಿಗಳಿವೆ. ಈ ನಾಡಿಗಳಲ್ಲಿ ಮುವತ್ತಾರು ಸಾವಿರ ನಾಡಿಗಳು ಎಡ ಭಾಗದಲ್ಲೂ ಮತ್ತು ಮೂವತ್ತಾರು ಸಾವಿರ ನಾಡಿಗಳು ನಮ್ಮ ಬಲ ಭಾಗದಲ್ಲೂ ಇರುತ್ತವೆ. ಈ ನಾಡಿಗಳಲ್ಲಿ ರಕ್ತ ಸಂಚಾರ ಸರಿಯಾಗಿ ಆದರೆ ಮನುಷ್ಯನಿಗೆ ಯಾವುದೇ ರೋಗ ಬರಲಾರದು.

ವೇದಗಳ ಸಾರವಾದ ಬ್ರಹತೀ ಛಂದಸ್ಸಿನಲ್ಲಿ ಒಂದು ಸಾವಿರ ಮಂತ್ರಗಳಿದ್ದು ಆ ಒಂದು ಸಾವಿರ ಮಂತ್ರದಲ್ಲಿ ಎಪ್ಪತ್ತೆರಡು ಸಾವಿರ ಅಕ್ಷರಗಳಿವೆ. ಈ ಒಂದು ಸಾವಿರ ಮಂತ್ರಗಳ ಸಾರವನ್ನು ಒಂದು ಸಾವಿರ ನಾಮಗಳ ರೂಪದಲ್ಲಿ ವೇದವ್ಯಾಸರು ನಮಗೆ ಕರುಣಿಸಿದ್ದಾರೆ. ಅದುವೇ ಶ್ರೀ ವಿಷ್ಣು ಸಹಸ್ರ ನಾಮ.

ವಿಷ್ಣು ಸಹಸ್ರ ನಾಮವನ್ನು ಪಠಿಸುವುದರಿಂದ ನಾವು ಬ್ರಹತೀ ಸಹಸ್ರದ ಎಪ್ಪತ್ತೆರಡು ಸಾವಿರ ಅಕ್ಷರಗಳನ್ನು ಜಪ ಮಾಡಿದಂತಾಗುತ್ತದೆ. ಇದರಿಂದ ನಮ್ಮ ಎಪ್ಪತ್ತೆರಡು ಸಾವಿರ ನಾಡಿಗಳಲ್ಲಿ ಪೂರ್ಣ ಪ್ರಮಾಣದ ರಕ್ತ ಸಂಚಾರ ಆಗುತ್ತದೆ. ಆದ್ದರಿಂದ ವಿಷ್ಣು ಸಹಸ್ರ ನಾಮ ಭವರೋಗ ಪರಿಹಾರಕ. ಆದರೆ ಅರ್ಥ ತಿಳಿದು ಹೃದಯ ತುಂಬಿ ಭಕ್ತಿಯಿಂದ ಪಾರಾಯಣ ಮಾಡುವುದು ಮುಖ್ಯ.

ವೇದಗಳಿಗೆ ಕನಿಷ್ಠ ಮೂರು ಅರ್ಥಗಳಿವೆ. ಮಹಾಭಾರತ ಶ್ಲೋಕಗಳಿಗೆ ಕನಿಷ್ಠ ಹತ್ತು ಅರ್ಥಗಳಿದ್ದರೆ, ಶ್ರೀ ವಿಷ್ಣು ಸಹಸ್ರ ನಾಮದ ಪ್ರತೀ ನಾಮಕ್ಕೆ ಕನಿಷ್ಠ ನೂರು ಅರ್ಥಗಳಿವೆ. ಈ ಕಾರಣಕ್ಕಾಗಿಯೇ ಪ್ರಾಚೀನರು ಭಗವದ್ಗೀತೆ ಮತ್ತು ಶ್ರೀ ವಿಷ್ಣು ಸಹಸ್ರ ನಾಮವನ್ನು ಅತ್ಯಮೂಲ್ಯ ಗ್ರಂಥವಾಗಿ ಪರಿಗಣಿಸಿದ್ದಾರೆ.

|| ಶ್ರೀಕೃಷ್ಣಾರ್ಪಣಮಸ್ತು ||

ಲೇಖನ

ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರಿ ಅಮ್ಮನವರ ಸನ್ನಿಧಾನಂ

ಭವಿಷ್ಯದ ಕುರಿತ ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ

ದೈವಜ್ಞ ಪ್ರಧಾನ ತಾಂತ್ರಿಕ ಜ್ಞಾನೇಶ್ವರ್ ರಾವ್ ತಂತ್ರಿ

8548998564

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...