ಯಾವುದೋ ಒಂದು ಅಂಗಡಿ ಮುಚ್ಚಿತ್ತು. ಕಾರಣಔೇನೆಂದರೆ, ಮಾಲೀಕ “ಗಾಳಿಪಟ ಹಾರಿಸಲು ಹೋಗಿದ್ದೇನೆ” ಎಂದು ಬೋರ್ಡ್ ಹಾಕಿದ್ದರು! ಈ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಕೆಲಸ ಮತ್ತು ಜೀವನದ ನಡುವಿನ ಸಮತೋಲನದ ಬಗ್ಗೆ ಚರ್ಚೆಗೆ ಗ್ರಾಸವಾಗಿದೆ.
ಅಸ್ಲಂ ಎಂಬುವವರು ತಮ್ಮ ಅಂಗಡಿಗೆ ಬೀಗ ಹಾಕಿ, “ಗಾಳಿಪಟ ಹಾರಿಸಲು ಹೋಗಿದ್ದೇನೆ” ಎಂದು ಬರೆದ ಬೋರ್ಡ್ ತೂಗು ಹಾಕಿದ್ದರು. ಈ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದು, ಅನೇಕರು ಇದನ್ನು ಮೆಚ್ಚಿಕೊಂಡರು. “ಇದು ನಿಜವಾದ ಜೀವನ” ಎಂದು ಕಮೆಂಟ್ ಮಾಡಿದರೆ “ಕೆಲಸದ ಒತ್ತಡದಿಂದ ಹೊರಬಂದು ಖುಷಿಯಾಗಿರಬೇಕು” ಎಂದು ಹಲವರು ಅಭಿಪ್ರಾಯಪಟ್ಟರು.
“ಇಂತಹ ಜೀವನ ನಮಗೂ ಬೇಕು” ಎಂದು ಹಲವರು ಹಂಬಲಿಸಿದ್ದು, “ಕೆಲಸದ ಜೊತೆ ಖುಷಿಗೂ ಸಮಯ ಮೀಸಲಿಡಬೇಕು” ಎಂದು ಕೆಲವರು ಹೇಳಿದರು. “ಈ ಮಾಲೀಕ ಉದ್ಯೋಗಿಗಳಿಗೆ ಮಾದರಿ” ಎಂದು ಇನ್ನು ಕೆಲವರು ಬರೆದಿದ್ದಾರೆ.
ಈ ಘಟನೆ ಅನೇಕರಿಗೆ ಪ್ರೇರಣೆ ನೀಡಿದೆ. ಕೆಲಸ ಮುಖ್ಯ, ಆದರೆ ಜೀವನದಲ್ಲಿ ಖುಷಿಗೂ ಸಮಯ ಇರಬೇಕು ಎಂಬುದನ್ನು ಇದು ನೆನಪಿಸಿದೆ.
जिंदगी असलम भाई जैसी ही होनी चाहिए…इतनी सरल इतनी फुरसतभरी🙂 pic.twitter.com/nkziB80NUZ
— Saurabh (@sauravyadav1133) February 19, 2025