ರಾಮನಗರ: ರಾಮನಗರ ಜಿಲ್ಲೆಯನ್ನು ಬೆಂಗಳೂರು ದಕ್ಷಿಣ ಎಂದು ಘೋಷಿಸಿದ್ದೇವೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ರಾಮನಗರ ಜಿಲ್ಲೆ ಚನ್ನಪಟ್ಟಣದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರ ಜನರ ಮನೆ ಬಾಗಿಲಿಗೆ ಹೋಗಿದೆ. ನಿವೇಶನಕ್ಕಾಗಿ 15,000 ದಷ್ಟು ಅರ್ಜಿಗಳು ಬಂದಿವೆ. ಈಗಾಗಲೇ 120 ಎಕರೆ ಜಮೀನು ಗುರುತಿಸಿದ್ದೇವೆ. ಅಭಿವೃದ್ಧಿಗೆ 100 ಕೋಟಿ ಮಂಜೂರು ಮಾಡುವ ವ್ಯವಸ್ಥೆಯನ್ನು ಮುಖ್ಯಮಂತ್ರಿಗಳು ಮಾಡುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ನಿವೇಶನಕ್ಕಾಗಿ ಸಲ್ಲಿಸಿದ ಅರ್ಜಿಗಳನ್ನು ಪರಿಶೀಲನೆ ಮಾಡುತ್ತಿದ್ದೇವೆ. ಸುಳ್ಳು, ನಿಜ ಎಲ್ಲವನ್ನು ಅಧಿಕಾರಿಗಳು ಪರಿಶೀಲನೆ ಮಾಡುತ್ತಿದ್ದಾರೆ. ಈಗಲೂ ನಿವೇಶನಕ್ಕೆ ಅರ್ಜಿ ಸಲ್ಲಿಸುವವರು ಸಲ್ಲಿಸಬಹುದು. ಕನಕಪುರ ವಾರ್ಡ್ ಗಳಲ್ಲಿ ಕುಳಿತು ಜಮೀನು ಹಂಚಿದ್ದೇವೆ. ಶಾಲೆ, ದೇವಸ್ಥಾನ ಇಟ್ಟುಕೊಂಡು ಹೊಸ ಪಟ್ಟಣ ಘೋಷಿಸುತ್ತೇವೆ. ಅಕ್ಕಪಕ್ಕದವರು ಜಮೀನು ಮಾರುವವರಿದ್ದರೆ ಒಳ್ಳೆಯ ಬೆಲೆಗೆ ಖರೀದಿಸುತ್ತೇವೆ ಎಂದು ಹೇಳಿದ್ದಾರೆ.