ಬೆಂಗಳೂರು: ನಿವೇಶನ ಕೊಡಿಸುವುದಾಗಿ ಕೋಟ್ಯಂತರ ರೂಪಾಯಿ ವಂಚಿಸಿದ್ದವನನ್ನು ಬೆಂಗಳೂರಿನ ಅನ್ನಪೂರ್ಣೇಶ್ವರಿ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ನಟರಾಜ ಬಂಧಿತ ಆರೋಪಿ ಎಂದು ಹೇಳಲಾಗಿದೆ. ಒಂದೇ ನಿವೇಶನವನ್ನು ಮೂವರಿಗೆ ನೋಂದಣಿ ಮಾಡಿಸುತ್ತಿದ್ದ ಆರೋಪಿ ಬಳಿಕ ಸೆಟಲ್ಮೆಂಟ್ ಮಾಡೋಣ ಎಂದು ಹೇಳಿ ಹಣವನ್ನು ಪೀಕುತ್ತಿದ್ದ. ನಟರಾಜ್ ವಿರುದ್ಧ ನಿವೇಶನ ಖರೀದಿಸಿ ವಂಚನೆಗೊಳಗಾದವರು ದೂರು ನೀಡಿದ್ದು, 10 ಕ್ಕೂ ಹೆಚ್ಚು ಪ್ರಕರಣ ದಾಖಲಾಗಿವೆ. ಆತನನ್ನು ವಶಕ್ಕೆ ಪಡೆದ ಪೊಲೀಸರು ವಿಚಾರಣೆ ನಡೆಸಿದ್ದಾರೆ ಎನ್ನಲಾಗಿದ್ದು, ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.