ಯಾದಗಿರಿ: ಸುರಪುರ ನಗರಸಭೆಯ ವ್ಯಾಪ್ತಿಯಲ್ಲಿ ಬರುವ ನಿವೇಶನ ರಹಿತ ಅರ್ಜಿದಾರರಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ.
ಆಸಕ್ತರು ಪ್ರಕಟಣೆ ಹೊರಡಿಸಿದ 7 ದಿನಗಳ ಒಳಗಾಗಿ ಆದಾಯ ಪತ್ರ, ಅಧಾರ್ ಕಾರ್ಡ್, ರೇಷನ್ ಕಾರ್ಡ್, ವಾಸಸ್ಥಳ ಪ್ರಮಾಣ ಹಾಗೂ ಮೂರು ಭಾವ ಚಿತ್ರ ಹಾಗೂ ವಿದ್ಯುತ್ ಬಿಲ್ಲು ಪಾವತಿಸಿದ ರಶೀದಿ ಮತ್ತು 20 ರೂ. ಛಾಪಾ ಕಾಗದದ ಮೇಲೆ ನಿವೇಶನ ಇಲ್ಲದಿರುವ ಬಗ್ಗೆ ಕೋರ್ಟ್ ನೋಟರಿ ಪತ್ರದೊಂದಿಗೆ ಅರ್ಜಿಯನ್ನು ಸಲ್ಲಿಸಬೇಕೆಂದು ಸುರಪುರ ಪೌರಾಯುಕ್ತರು ತಿಳಿಸಿದ್ದಾರೆ.