ಬಳ್ಳಾರಿ: ಕುರುಗೋಡು ಪುರಸಭೆ ವ್ಯಾಪ್ತಿಯಲ್ಲಿ ಬರುವ ಅರ್ಹ ನಿವೇಶನ ರಹಿತರಿಂದ ಅರ್ಜಿ ಆಹ್ವಾನಿಸಲಾಗಿದೆ.
ಬಳ್ಳಾರಿ ರಸ್ತೆಯಲ್ಲಿ ಬರುವ ಸರ್ವೆ ನಂ.408/1ರಲ್ಲಿನ 3.91 ಎಕರೆ ಹಾಗೂ 408/2ರಲ್ಲಿನ 3.90 ಎಕರೆ ಮತ್ತು ಸರ್ವೇ 395ರಲ್ಲಿ 8.0 ಎಕರೆ ಒಟ್ಟು ವಿಸ್ತೀರ್ಣ 15.81 ಎಕರೆ ಆಶ್ರಯ ವಸತಿ ವಿನ್ಯಾಸದಲ್ಲಿ ರಚನೆಯಾಗುವ ನಿವೇಶನಗಳಿಗೆ ಅನುಗುಣವಾಗಿ ನಿವೇಶನ ರಹಿತರಿಗೆ ನಿವೇಶನ ಹಂಚಿಕೆ ಮಾಡಲು ಪರಿಶಿಷ್ಟ ಜಾತಿಯವರಿಗೆ ಶೇ.17.15, ಪರಿಶಿಷ್ಟ ಪಂಗಡ ಶೇ.6.95, ಹಿಂದುಳಿದ ವರ್ಗಕ್ಕೆ ಶೇ.7.25, ಅಲ್ಪಸಂಖ್ಯಾತರಿಗೆ ಶೇ.9, ವಿಕಲಚೇತನರಿಗೆ ಶೇ.5, ಮಾಜಿ ಸೈನಿಕರಿಗೆ ಶೇ.1 ರಂತೆ ನಿವೇಶನ ವಿತರಣೆ ಮಾಡಲು ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ.
ಅರ್ಜಿ ಸಲ್ಲಿಸಲು ಕೊನೆಯ ದಿನ ಮಾರ್ಚ್ 15 ಆಗಿರುತ್ತದೆ.
ಬೇಕಾದ ದಾಖಲೆಗಳು:
ನಿಗದಿ ನಮೂನೆಯಲ್ಲಿ ಅರ್ಜಿ ಭರ್ತಿ ಮಾಡಿ, ಅರ್ಜಿದಾರರ ಇತ್ತೀಚಿನ ಪಾಸ್ ಪೋರ್ಟ್ ಅಳತೆಯ 2 ಭಾವಚಿತ್ರ, ಅರ್ಜಿದಾರರು ಪುರಸಭೆ ಹಾಗೂ ಇತರೇ ಯಾವುದೇ ಪ್ರದೇಶದಲ್ಲಿ ಕುಟುಂಬದವರ, ಅರ್ಜಿದಾರರ ಹೆಸರಿನಲ್ಲಿ ಆಸ್ತಿ ಇರುವಂತಿಲ್ಲ. ನೋಟರಿ ಅಫಿಡೇವಿಟ್ ಲಗತ್ತಿಸಬೇಕು. ಮಹಿಳೆ, ವಿಧವೆ, ವಿಚ್ಛೇದಿತರಿಗೆ ಆದ್ಯತೆ ನೀಡಲಾಗುವುದು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರು ಜಾತಿ ಮತ್ತು ಆದಾಯ ಪ್ರಮಾಣ ಪತ್ರವನ್ನು ಲಗತ್ತಿಸಬೇಕು. ಕುಟುಂಬದ ಪಡಿತರ ಚೀಟಿ ಹಾಗೂ ಎಲ್ಲಾ ಸದಸ್ಯರ ನಕಲು ಪ್ರತಿ, ಅರ್ಜಿದಾರರ ಆಧಾರಕಾರ್ಡ್ ಮತ್ತು ಮತದಾರ ಗುರುತಿನ ಚೀಟಿ, ಅಂಗವಿಕಲರಾಗಿದಲ್ಲಿ ಜಿಲ್ಲಾ ವೈದ್ಯಾಧಿಕಾರಿಗಳಿಂದ ಪಡೆದ ಪ್ರಮಾಣ ಪತ್ರ, ಮಾಜಿ ಸೈನಿಕರು, ಹಿರಿಯ ನಾಗರಿಕರಾಗಿದ್ದಲ್ಲಿ ಸಂಬಂಧಿಸಿದ ಪ್ರಮಾಣ ಪತ್ರ, ಫಲಾನುಭವಿಯು ಸಾಮಾನ್ಯ, ಅಲ್ಪ ಸಂಖ್ಯಾತ ವರ್ಗಕ್ಕೆ ಸೇರಿದವರಾಗಿದ್ದರೆ, ಆರ್ಥಿಕವಾಗಿ ಹಿಂದುಳಿದವರಾಗಿದ್ದರೆ, ವಾರ್ಷಿಕ ಆದಾಯ 2 ಲಕ್ಷಕ್ಕಿಂತ ಕಡಿಮೆ ಹೊಂದಿದ ಪ್ರಮಾಣ ಪತ್ರ ನೀಡಬೇಕು.
ಅರ್ಜಿ ನಮೂನೆಗಾಗಿ http://www.kurugodutown.mru.gov.in ವೆಬ್‍ಸೈಟ್‍ನಲ್ಲಿ ಮಾಹಿತಿ ಪಡೆಯಬಹುದು. ಹೆಚ್ಚಿನ ಮಾಹಿತಿಗಾಗಿ ಕುರುಗೋಡು ಪುರಸಭೆ ಕಾರ್ಯಾಲಯ ಅಥವಾ ದೂ.08393-263166 ಗೆ ಸಂಪರ್ಕಿಸಬಹುದು ಎಂದು ಪುರಸಭೆಯ ಮುಖ್ಯಾಧಿಕಾರಿ ತಿಳಿಸಿದ್ದಾರೆ.