ಬೆಂಗಳೂರು: ಸ್ವಂತ ನಿವೇಶನವಿದ್ದರೂ ಮಾಲೀಕತ್ವ ಇಲ್ಲದೇ ಪರದಾಡುತ್ತಿದ್ದವರಿಗೆ ಸಿಹಿ ಸುದ್ದಿ ಸಿಕ್ಕಿದೆ. ಕರ್ನಾಟಕ ಮುನಿಸಿಪಾಲಿಟಿಗಳ(ತಿದ್ದುಪಡಿ) ವಿಧೇಯಕಕ್ಕೆ ವಿಧಾನಸಭೆ ಅನುಮೋದನೆ ನೀಡಿದೆ.
ಅಕ್ರಮ ಸಕ್ರಮ ಪ್ರಕರಣ ಸುಪ್ರೀಂ ಕೋರ್ಟ್ ನಲ್ಲಿದ್ದು, ಇದರ ಹೊರತಾಗಿ ನಗರ ಯೋಜನಾ ಪ್ರಾಧಿಕಾರದ ನಿಯಮಗಳಿಂದಾಗಿ ರೆವಿನ್ಯೂ ನಿವೇಶನದಾರರು ಸಂಕಷ್ಟ ಅನುಭವಿಸುವಂತಾಗಿತ್ತು. ಇ- ಖಾತೆ, ಸ್ಕೆಚ್, ನಿವೇಶನ ಮಾರಾಟ, ಮನೆ ನಿರ್ಮಾಣಕ್ಕೆ ಸಾಲ ಪಡೆಯಲು ತೊಂದರೆಯಾಗಿತ್ತು. ಈ ಸಮಸ್ಯೆಗಳನ್ನು ಬಗೆಹರಿಸಿ ಸ್ಥಳೀಯ ಮುನ್ಸಿಪಾಲಿಟಿ, ಪಂಚಾಯಿತಿಗಳಲ್ಲಿ ಅನುಮತಿ ಪಡೆದು ನಿವೇಶನದ ಹಕ್ಕುದಾರಿಕೆ ಪಡೆದುಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.