alex Certify ಹೃದಯಾಘಾತಕ್ಕೆ ತುತ್ತಾಗುವ ಭಾರತೀಯ ಪುರುಷರ ಕುರಿತು ʼಶಾಕಿಂಗ್‌ʼ ಸಂಗತಿ ಬಹಿರಂಗ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹೃದಯಾಘಾತಕ್ಕೆ ತುತ್ತಾಗುವ ಭಾರತೀಯ ಪುರುಷರ ಕುರಿತು ʼಶಾಕಿಂಗ್‌ʼ ಸಂಗತಿ ಬಹಿರಂಗ

Sidharth Shukla Was 'Fit', But 50 Per Cent Indian Men Who Suffer Heart Attacks Are Under 50

ಯುವಕರಲ್ಲೇ ಹೃದಯಾಘಾತವಾಗುತ್ತಿರುವ ಸುದ್ದಿಗಳು ಪದೇ ಪದೇ ಕೇಳಿ ಬರುತ್ತಿರುವ ಹಿನ್ನೆಲೆಯಲ್ಲಿ ನಟ ಸಿದ್ಧಾರ್ಥ್‌ ಶುಕ್ಲಾ ಸಾವು ನೆಟ್ಟಿಗರಲ್ಲಿ ಭಾರೀ ಶಾಕ್ ಸೃಷ್ಟಿಸಿದೆ. ಬಿಗ್ ಬಾಸ್ ಸೀಸನ್ 13ರ ವಿಜೇತ ಯುವನಟ ಅಥ್ಲೆಟಿಕ್ ಅಂಗಸೌಷ್ಠವದೊಂದಿಗೆ ಸಕ್ರಿಯ ಜೀವನದಲ್ಲಿದ್ದರೂ ಸಹ ಹೃದಯಾಘಾತಕ್ಕೆ ಬಲಿಯಾಗಿದ್ದಾರೆ.

ಇದೇ ವರ್ಷದ ಜೂನ್‌ನಲ್ಲಿ ಡೆನ್ಮಾರ್ಕ್‌ನ 29 ವರ್ಷ ವಯಸ್ಸಿನ ಫುಟ್ಬಾಲ್ ಆಟಗಾರ ಕ್ರಿಶ್ಚಿಯನ್ ಎರಿಕ್ಸೆನ್‌‌ಗೆ ದಿಢೀರ್‌ ಹೃದಯ ಬಡಿತ ನಿಂತುಬಿಟ್ಟಾಗ ಅವರಿಗೆ ಪ್ರಾಥಮಿಕ ಚಿಕಿತ್ಸೆ ನೀಡಿ ಕೂಡಲೇ ಆಸ್ಪತ್ರೆಗೆ ಕೊಂಡೊಯ್ದು ಜೀವ ಉಳಿಸಿಕೊಳ್ಳಲಾಗಿತ್ತು.

ರಾಜ್ಯ ಬಿಜೆಪಿ ನಾಯಕತ್ವದ ಬಗ್ಗೆ ಸ್ಪಷ್ಟ ಸಂದೇಶ ನೀಡಿದ ಅಮಿತ್ ಶಾ

ಆದರೆ ಸಿದ್ಧಾರ್ಥ್‌ಗೆ ಅಷ್ಟು ಅದೃಷ್ಟವಿದ್ದಂತೆ ಕಾಣಲಿಲ್ಲ. ದೇಶವಾಸಿಗಳಲ್ಲಿ 50ರ ವಯಸ್ಸಿನ ಒಳಗೇ ಹೃದಯಾಘಾತ ಹಾಗೂ ಹೃದಯಸ್ತಂಭನ ಸಂಭವಿಸುವ ಸಾಧ್ಯತೆಗಳ ಬಗ್ಗೆ ಮಾತನಾಡಿರುವ ಇಂಡಿಯನ್ ಹಾರ್ಟ್ ಅಸೋಸಿಯೇಷನ್, “ಇತರೆ ದೇಶಗಳಿಗಿಂತಲೂ ಭಾರತೀಯರದಲ್ಲಿ ಬಹುತೇಕ ಕಡಿಮೆ ವಯಸ್ಸಿನಲ್ಲೇ ಯಾವುದೇ ಮುನ್ಸೂಚನೆಗಳನ್ನೂ ಕೊಡದೇ ಹೃದ್ರೋಗಗಳು ಆರಂಭಗೊಳ್ಳುತ್ತವೆ. ಭಾರತೀಯ ಪುರುಷರಲ್ಲಿ ಸಂಭವಿಸುವ ಎಲ್ಲಾ ಹೃದಯಾಘಾತಗಳಲ್ಲಿ 50%ನಷ್ಟು ಪ್ರಕರಣಗಳು 50ರ ವಯಸ್ಸಿನೊಳಗಿನವರಲ್ಲೇ ಸಂಭವಿಸುತ್ತಿದೆ. 25%ನಷ್ಟು ಹೃದಯಾಘಾತಗಳು 40 ವರ್ಷ ವಯಸ್ಸಿನೊಳಗಿನ ಪುರುಷರಲ್ಲಿ ಸಂಭವಿಸುತ್ತಿವೆ. ಹೃದ್ರೋಗದ ವಿಚಾರದಲ್ಲಿ ಭಾರತೀಯ ಮಹಿಳೆಯರಲ್ಲೂ ಸಹ ಸಾವಿನ ಸಾಧ್ಯತೆ ಬಹಳ ಹೆಚ್ಚಿದೆ” ಎಂದು ತಿಳಿಸಿದೆ.

ದಿಢೀರ್‌ ಹೃದಯಸ್ತಂಭನ ಸಂಭವಿಸುವ ಇತಿಹಾಸದ ಕುಟುಂಬದ ಸದಸ್ಯರಲ್ಲೂ ಸಹ ಈ ರೀತಿಯ ಸಾಧ್ಯತೆ ಬಹಳ ಇರುತ್ತದೆ ಎನ್ನುವ ಹೃದ್ರೋಗ ತಜ್ಞ ಡಾ. ಕೃಷ್ಣಾರೆಡ್ಡಿ ನಲ್ಲಮಲ, ಹೃದಯಾಘಾತದಿಂದ ಹೃದಯಕ್ಕೆ ಹಾನಿ ಮಾಡಿಕೊಂಡ ಮಂದಿಯಲ್ಲಿ ಹೃದಯಸ್ತಂಭನದ ಸಾಧ್ಯತೆಗಳು ಇರುತ್ತವೆ ಎಂದಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...