alex Certify ಕೆಲವೊಂದು ‘ಆರೋಗ್ಯ’ದ ಪಾಠ ಹೇಳಿದೆ ಸಿದ್ಧಾರ್ಥ್ ಶುಕ್ಲಾ ಹಠಾತ್ ಸಾವು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೆಲವೊಂದು ‘ಆರೋಗ್ಯ’ದ ಪಾಠ ಹೇಳಿದೆ ಸಿದ್ಧಾರ್ಥ್ ಶುಕ್ಲಾ ಹಠಾತ್ ಸಾವು

‘ಬಿಗ್ ಬಾಸ್’ ಖ್ಯಾತಿಯ ನಟ ಸಿದ್ಧಾರ್ಥ್ ಶುಕ್ಲಾ, ಕೋಟ್ಯಾಂತರ ಅಭಿಮಾನಿಗಳನ್ನು ತೊರೆದು ಹೋಗಿದ್ದಾರೆ. ಸೆಪ್ಟೆಂಬರ್ 2 ರಂದು ಹೃದಯಾಘಾತವಾಗಿದೆ.  ಸಿದ್ಧಾರ್ಥ್ ಶುಕ್ಲಾ ಹೋಗುವ ಮೊದಲು ಜನರಿಗೆ ಅನೇಕ ವಿಷ್ಯವನ್ನು ಹೇಳಿ ಹೋಗಿದ್ದಾರೆ.

ಧೂಮಪಾನದಿಂದ ದೂರವಿರಿ : ಧೂಮಪಾನದಿಂದ ದೂರವಿರುವುದು ಬಹಳ ಮುಖ್ಯ. ಧೂಮಪಾನದಿಂದ ನನಗೆ ಏನು ಆಗಿಲ್ಲ, ಆಗುವುದಿಲ್ಲ ಎಂಬ ನಂಬಿಕೆಯಲ್ಲಿರಬೇಡಿ. ಧೂಮಪಾನ ಒಂದಲ್ಲ ಒಂದು ರೀತಿಯಲ್ಲಿ ದೇಹಕ್ಕೆ ಹಾನಿಯುಂಟು ಮಾಡುತ್ತದೆ.

ವಿಶ್ರಾಂತಿ : ಜೀವನದಲ್ಲಿ ನಾವು ಕೆಲಸವನ್ನು ಗಂಭೀರವಾಗಿ ಪರಿಗಣಿಸಿರುತ್ತೇವೆ. ಇಡೀ ದಿನ ಕೆಲಸ ಮಾಡುತ್ತೇವೆ. ದೇಹಕ್ಕೆ ವಿಶ್ರಾಂತಿ ಕೊಡುವುದನ್ನು ಮರೆಯುತೇವೆ. ವಿಶ್ರಾಂತಿ ನೀಡುವುದು ಬಹಳ ಮುಖ್ಯ. ವಿಶ್ರಾಂತಿ ದೇಹಕ್ಕೆ ಮಾತ್ರವಲ್ಲ ಮನಸ್ಸಿಗೂ ಬಹಳ ಮುಖ್ಯ.

ನಿಯಮಿತ ಆರೋಗ್ಯ ತಪಾಸಣೆ : ಒಂದು ವಯಸ್ಸಿನ ನಂತ್ರ ದೇಹದಲ್ಲಿ ಸಾಕಷ್ಟು ಬದಲಾವಣೆಯಾಗುತ್ತದೆ. 30 ವರ್ಷದ ನಂತ್ರ ವರ್ಷಕ್ಕೊಮ್ಮೆ ಸಂಪೂರ್ಣ ತಪಾಸಣೆ ಮಾಡುವುದು ಅತ್ಯಗತ್ಯ. ಸಣ್ಣ ಸಮಸ್ಯೆ ಕಾಣಿಸಿಕೊಂಡಲ್ಲಿ ಅವಶ್ಯವಾಗಿ ವೈದ್ಯರನ್ನು ಭೇಟಿಯಾಗಬೇಕು. ಯಾವುದೇ ನಿರ್ಲಕ್ಷ್ಯ ಸಲ್ಲದು.

ಒತ್ತಡದಿಂದ ಮುಕ್ತವಾಗಿರಿ : ಇಂದಿನ ಸಮಯದಲ್ಲಿ ಎಲ್ಲರೂ ಒತ್ತಡದಲ್ಲಿರುತ್ತಾರೆ. ಬಿಡುವಿಲ್ಲದ ಕೆಲಸ, ಸಮಸ್ಯೆ ಜನರನ್ನು ಕಾಡುತ್ತದೆ. ಎಲ್ಲ ಸಮಸ್ಯೆ ಮಧ್ಯೆಯೂ ಒತ್ತಡದಿಂದ ದೂರವಿರುವುದು ಬಹಳ ಮುಖ್ಯ. ಹಾಗಾಗಿ ಪ್ರತಿ ದಿನ ಧ್ಯಾನ, ವ್ಯಾಯಾಮ ಮಾಡುವುದನ್ನು ಮರೆಯಬೇಡಿ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...