alex Certify ಗರ್ಭಕೋಶ ತೆಗೆಯೋದ್ರಿಂದ ಕಾಡಬಹುದು ಈ ಎಲ್ಲ ಸಮಸ್ಯೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗರ್ಭಕೋಶ ತೆಗೆಯೋದ್ರಿಂದ ಕಾಡಬಹುದು ಈ ಎಲ್ಲ ಸಮಸ್ಯೆ

ಮಹಿಳೆಯರ ದೇಹ ಬಹಳ ಸೂಕ್ಷ್ಮ. ಖಾಸಗಿ ಭಾಗಗಳಲ್ಲಿ ಸೋಂಕು ಅಥವಾ ಗುಪ್ತ ಕಾಯಿಲೆ ಅವರನ್ನು ಕಾಡುತ್ತದೆ. ಗರ್ಭಕೋಶದಿಂದ ಈ ಎಲ್ಲ ಸಮಸ್ಯೆ ಕಾಡುತ್ತಿದೆ ಎನ್ನುವವರಿದ್ದಾರೆ. ಫೈಬ್ರಾಯ್ಡ್, ಎಂಡೊಮೆಟ್ರಿಯೊಸಿಸ್, ಕ್ಯಾನ್ಸರ್ ಮತ್ತು ಅತಿಯಾದ ರಕ್ತಸ್ರಾವವಾಗ್ತಿದ್ದರೆ ಗರ್ಭಕೋಶವನ್ನು ತೆಗೆಯಲಾಗುತ್ತದೆ. ಆದ್ರೆ ಇತ್ತೀಚಿನ ದಿನಗಳಲ್ಲಿ ಕೆಲ ಮಹಿಳೆಯರು ಸಣ್ಣಪುಟ್ಟ ಕಾರಣಕ್ಕೂ ಗರ್ಭಕೋಶ ತೆಗೆಸಿಕೊಳ್ತಿದ್ದಾರೆ. ಅನಾವಶ್ಯಕವಾಗಿ ಗರ್ಭಕೋಶ ತೆಗೆಯುವುದು ಒಳ್ಳೆಯದಲ್ಲ. ಇದ್ರಿಂದ ನಾನಾ ಸಮಸ್ಯೆ ಕಾಡುತ್ತದೆ.

ನೀವಿನ್ನು ತಾಯಿ ಆಗಿಲ್ಲ, ಮುಂದೆ ತಾಯಿ ಆಗುವ ಬಯಕೆ ಇದೆ ಎನ್ನುವವರು ಕ್ಷುಲ್ಲಕ ಕಾರಣಕ್ಕೆ ಗರ್ಭಕೋಶ ತೆಗೆಯುವ ಪ್ರಯತ್ನಕ್ಕೆ ಹೋಗ್ಬೇಡಿ. ಗರ್ಭಕೋಶವಿಲ್ಲದೆ ನೀವು ತಾಯಿಯಾಗಲು ಸಾಧ್ಯವಿಲ್ಲ.

ಗರ್ಭಾಶಯವನ್ನು ಯೋನಿ ಮೂಲಕ ತೆಗೆಯುತ್ತಿದ್ದರೆ ಇದರಿಂದ ಯೋನಿಗೆ ಹಾನಿಯಾಗುವ ಸಾಧ್ಯತೆ ಇದೆ. ಯೋನಿ ಮಹಿಳೆಯ ಅತ್ಯಂತ ಸೂಕ್ಷ್ಮ ಭಾಗ. ತೆಗೆಯುವಾಗ ಸಮಸ್ಯೆ ಆದಲ್ಲಿ ಯೋನಿ ಹಾನಿಗೊಳಗಾಗುವ ಸಾಧ್ಯತೆ ಇರುತ್ತದೆ.

ಗರ್ಭಾಶಯವನ್ನು ತೆಗೆದುಹಾಕುವ ಪ್ರಕ್ರಿಯೆಯು ಸಾಕಷ್ಟು ಉದ್ದವಾಗಿದೆ, ಇದರಿಂದಾಗಿ ಅನೇಕ ಮಹಿಳೆಯರು ಅಧಿಕ ರಕ್ತಸ್ರಾವದಿಂದ ಬಳಲುತ್ತಿದ್ದಾರೆ. ಈ ಕಾರಣದಿಂದಾಗಿ, ತ್ವರಿತ ಚೇತರಿಕೆ ಸಾಧ್ಯವಿಲ್ಲ. ಇದರಿಂದಾಗಿ ನೀವು ರಕ್ತಹೀನತೆಗೆ ಬಲಿಯಾಗಬಹುದು.

ಶಸ್ತ್ರಚಿಕಿತ್ಸೆಯ ಸಮಯದಲ್ಲಿ ಸುತ್ತಮುತ್ತಲಿನ ಆಂತರಿಕ ಅಂಗಗಳು ಗಾಯಗೊಳ್ಳುತ್ತವೆ. ಕರುಳು, ಸೊಂಟ, ಮೂಳೆ, ಅಂಡಾಶಯಕ್ಕೆ ಹಾನಿಯಾಗುವ ಸಾಧ್ಯತೆ ಇದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...