ದೇಶದಾದ್ಯಂತ ಡೆಂಗ್ಯೂ ಹಾವಳಿ ಹೆಚ್ಚಾಗಿದೆ. ಸೊಳ್ಳೆ ಕಡಿತದಿಂದ ಹರಡುವ ಡೆಂಗ್ಯೂವಿಗೆ ಸೂಕ್ತ ಸಮಯದಲ್ಲಿ ಚಿಕಿತ್ಸೆ ಸಿಗದೆ ಹೋದ್ರೆ ಅಪಾಯ ಹೆಚ್ಚು. ಡೆಂಗ್ಯೂದಿಂದ ನೀವು ಚೇತರಿಸಿಕೊಂಡ ನಂತ್ರವೂ ಅನೇಕ ಸಮಸ್ಯೆ ನಿಮ್ಮನ್ನು ಕಾಡುತ್ತದೆ.
ಡೆಂಗ್ಯೂ ವಾಸಿಯಾದ ನಂತರ ಕಾಡುವ ಅಲೋಪೆಸಿಯಾ ನಿಮ್ಮ ಕೂದಲನ್ನು ಹಾನಿಗೊಳಿಸುತ್ತದೆ. ಇದ್ರಿಂದ ಕೂದಲು ಉದುರಲು ಶುರುವಾಗುತ್ತದೆ. ಇದಕ್ಕೆ ಮುಖ್ಯ ಕಾರಣ ಪೋಷಕಾಂಶಗಳ ಕೊರತೆ.
ಇದಲ್ಲದೆ ಡೆಂಗ್ಯೂ ನಂತರ ಜನರು ತಿಂಗಳುಗಟ್ಟಲೆ ಕೀಲು ನೋವಿನಿಂದ ಬಳಲುತ್ತಾರೆ. ಇದಕ್ಕೆ ಮುಖ್ಯ ಕಾರಣ ಡೆಂಗ್ಯೂ ಅಸ್ಥಿಮಜ್ಜೆಯ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ. ಇದು ಮೂಳೆಗಳಿಗೆ ಹಾನಿ ಮಾಡುತ್ತದೆ.
ಜ್ವರದಿಂದ ನೀವು ಚೇತರಿಸಿಕೊಂಡ್ರೂ ಸ್ನಾಯುಗಳಲ್ಲಿ ದೌರ್ಬಲ್ಯವು ದೀರ್ಘಕಾಲದವರೆಗೆ ಕಂಡುಬರುತ್ತದೆ. ವಿಪರೀತ ಆಯಾಸ ಮತ್ತು ದೌರ್ಬಲ್ಯ ನಿಮ್ಮನ್ನು ಒಂದು ತಿಂಗಳವರೆಗೆ ಕಾಡುವುದಲ್ಲದೆ ತೂಕ ನಷ್ಟವಾಗುತ್ತದೆ. ಅನೇಕ ಡೆಂಗ್ಯೂ ರೋಗಿಗಳ ತೂಕದಲ್ಲಿ ಇಳಿಕೆ ಕಾಣಿಸುತ್ತದೆ. ಪ್ಲೇಟ್‌ಲೆಟ್‌ಗಳ ಇಳಿಕೆ ಇದಕ್ಕೆ ಕಾರಣವಾಗಿರುತ್ತದೆ.
ಡೆಂಗ್ಯೂ ಗುಣವಾಗಿ ತಿಂಗಳವರೆಗೆ ಈ ಸಮಸ್ಯೆ ಕಾಣಿಸಿಕೊಂಡ್ರೆ ಅದನ್ನು ಮಾಮೂಲಿ ಎನ್ನಬಹುದು. ಅದೇ ತಿಂಗಳ ನಂತ್ರವೂ ಈ ಎಲ್ಲ ಸಮಸ್ಯೆ ಕಾಡ್ತಿದ್ದರೆ ನೀವು ವೈದ್ಯರನ್ನು ಭೇಟಿಯಾಗಬೇಕು.
ಡೆಂಗ್ಯೂನಿಂದ ಚೇತರಿಸಿಕೊಂಡ ವ್ಯಕ್ತಿ ಆಹಾರಕ್ಕೆ ಬಹಳ ಮಹತ್ವ ನೀಡಬೇಕಾಗುತ್ತದೆ. ಸಾಧ್ಯವಾದಷ್ಟು ಪ್ರೋಟೀನ್, ಫೈಬರ್ ಮತ್ತು ಜ್ಯೂಸ್ ಸೇವನೆ ಮಾಡಬೇಕು. ಎಳ ನೀರಿನ ಸೇವನೆ ಬಹಳ ಒಳ್ಳೆಯದು. ಇದು ನಿಮ್ಮ ದೇಹಕ್ಕೆ ಶಕ್ತಿಯನ್ನು ನೀಡುವುದಲ್ಲದೆ, ದೇಹದ ಸ್ನಾಯುಗಳನ್ನು ಬಲಪಡಿಸುತ್ತದೆ.