
ಈ ನಡುವೆ ಸಿದ್ಧಾರ್ಥ್ ಚೋಪ್ರಾ ಅವರು ನೀಲಂ ಅವರಿಗೆ ವಿಶೇಷವಾಗಿ ಹುಟ್ಟುಹಬ್ಬದ ಶುಭಾಶಯ ತಿಳಿಸಿ, ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ.
ಸಿದ್ಧಾರ್ಥ್ ಮತ್ತು ನೀಲಂ ಸ್ನೇಹಿತರೊಂದಿಗೆ ಸುತ್ತಾಡುತ್ತಿರುವ ಫೋಟೋಗಳನ್ನು ಕೂಡ ಹಂಚಿಕೊಂಡಿದ್ದಾರೆ.
34ರ ಜೆನ್ನಿ, 35ರ ಆಕೆಯ ಗಂಡ ಈ ವಯಸ್ಸಿನಲ್ಲೇ ಅಜ್ಜ – ಅಜ್ಜಿ…!
“ನೀಲಂ ಉಪಾಧ್ಯಾಯರಿಗೆ ಹುಟ್ಟುಹಬ್ಬದ ಶುಭಾಶಯಗಳು. ನೀವೊಂದು ಅದ್ಭುತ ಹಾಗೂ ಸ್ಫೂರ್ತಿಯಾಗಿದ್ದೀರಿ. ನಿಮಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು” ಎಂದು ಬರೆದಿದ್ದಾರೆ.
ಏತನ್ಮಧ್ಯೆ, ನೀಲಂ ಉಪಾಧ್ಯಾಯ ಅವರ ಇನ್ಸ್ಟಾಗ್ರಾಂ ತುಂಬೆಲ್ಲಾ ಅವರು ಗೋವಾದಲ್ಲಿ ಮಾಡಿದ ಹುಟ್ಟುಹಬ್ಬ ಆಚರಣೆಯ ಫೋಟೋಗಳು ತುಂಬಿ ಹೋಗಿವೆ. ಅಲ್ಲದೆ “ನನಗೆ ಜನ್ಮದಿನದ ಶುಭಾಶಯಗಳು” ಎಂದು ಶೀರ್ಷಿಕೆ ನೀಡಿದ್ದಾರೆ.
ಮಗಳ ವಿಚ್ಛೇದನದ ಬಗ್ಗೆ ಮೌನ ಮುರಿದ ಸಮಂತಾ ತಂದೆ
2019 ರಲ್ಲಿ ಗಣೇಶ ಪೂಜೆಯಲ್ಲಿ ನೀಲಂ ಉಪಾಧ್ಯಾಯ ಮತ್ತು ಸಿದ್ಧಾರ್ಥ್ ಚೋಪ್ರಾ ಮೊದಲ ಬಾರಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದರು. ಅಲ್ಲದೆ ಕಳೆದ ವರ್ಷ ಹೋಳಿ ಪಾರ್ಟಿಯಲ್ಲಿ ಕೂಡ ಕಾಣಿಸಿಕೊಂಡಿದ್ದರು. ಹಾಗೂ ಪಾರ್ಟಿಯಲ್ಲಿ ಪ್ರಿಯಾಂಕಾ ಚೋಪ್ರಾ ಮತ್ತು ನಿಕ್ ಜೊನಾಸ್ ಜೊತೆ ಸುತ್ತಾಡಿದ್ದರು.

