ಬೆಂಗಳೂರು: ತುಮಕೂರು ಸಿದ್ದಗಂಗಾ ಮಠಕ್ಕೆ ಅನುದಾನ ಮುಂದುವರೆಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ.
ಸಿದ್ದಗಂಗಾ ಮಠದ ವಸತಿ ನಿಲಯದ ಟೆಂಡರ್ ಮುಂದುವರಿಸುವಂತೆ ಸಿಎಂ ತಿಳಿಸಿದ್ದಾರೆ. ಸಾವಿರಾರು ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಅನುಕೂಲವಾಗುವ ಟೆಂಡರ್ ಇದಾಗಿದ್ದು, 9.90 ಕೋಟಿ ರೂ. ಅನುದಾನ ತಡೆಹಿಡಿಯಲಾಗಿತ್ತು. ಇದನ್ನು ಮುಂದುವರೆಸುವಂತೆ ಲೋಕೋಪಯೋಗಿ ಇಲಾಖೆಗೆ ಸೂಚನೆ ನೀಡಲಾಗಿದೆ.
ಮಠದಲ್ಲಿ ಸಾವಿರಾರು ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿರುವ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಹಿತ ದೃಷ್ಟಿಯಿಂದ ವಿಶೇಷ ಪ್ರಕರಣದಡಿ ಅನುದಾನ ಮುಂದುವರಿಸಲು ಸಿಎಂ ನಿರ್ಧಾರ ಕೈಗೊಂಡಿದ್ದಾರೆ. ಟೆಂಡರ್ ಮುಂದುವರಿಸಲು ಸೂಚನೆ ನೀಡಿ ಕಾಮಗಾರಿ ಮುಂದುವರೆಸಲು ತಿಳಿಸಿದ್ದಾರೆ.
ಲೋಕೋಪಯೋಗಿ ಇಲಾಖೆಯಲ್ಲಿ ಆರಂಭವಾಗದ ಕಾಮಗಾರಿಗಳಿಗೆ ತಡೆ ನೀಡಲಾಗಿತ್ತು. ಕಾಮಗಾರಿಗಳ ಮರುಪರಿಶೀಲನೆ ಹಿನ್ನಲೆಯಲ್ಲಿ ಕಾಮಗಾರಿಗೆ ತಾತ್ಕಾಲಿಕವಾಗಿ ಸರ್ಕಾರ ತಡೆ ಹಿಡಿದಿದ್ದು, ಇದರಲ್ಲಿ 9.90 ಕೋಟಿ ರೂ. ವೆಚ್ಚದ ಮಠದ ವಸತಿ ನಿಲಯ ಕಾಮಗಾರಿ ಕೂಡ ಸೇರಿತ್ತು. ಇದೀಗ ಸಿಎಂ ತುಮಕೂರಿನ ಸಿದ್ದಗಂಗಾ ಮಠಕ್ಕೆ ತಡೆಹಿಡಿಯಲಾಗಿದ್ದ ಅನುದಾನ ಮುಂದುವರೆಸಲು ಸೂಚಿಸಿದ್ದಾರೆ ಎನ್ನಲಾಗಿದೆ.