ವಿಜಯಪುರ: ಜ್ಞಾನ ಯೋಗಾಶ್ರಮದ ಸಿದ್ದೇಶ್ವರ ಸ್ವಾಮೀಜಿಯವರ ಅಂತಿಮ ಯಾತ್ರೆಯಲ್ಲಿ ಲಕ್ಷಾಂತರ ಭಕ್ತರು ಭಾಗಿಯಾಗಿದ್ದಾರೆ. ವಿಜಯಪುರದ ಸೈನಿಕ ಶಾಲೆ ಆವರಣದಿಂದ ಅಂತಿಮ ಯಾತ್ರೆ ಆರಂಭವಾಗಿದೆ.
ವಿಜಯಪುರ ನಗರದಲ್ಲಿ ಎಲ್ಲಿ ನೋಡಿದರೂ ಜನಸಾಗರ ಕಂಡುಬಂದಿದೆ. ವಿಜಯಪುರ ರಸ್ತೆಯ ಇಕ್ಕೆಲಗಳಲ್ಲಿ ಅಪಾರ ಭಕ್ತ ಸಾಗರ ನೆರೆದಿದೆ. ಸಿದ್ದೇಶ್ವರ ಸ್ವಾಮೀಜಿಗೆ ಜೈ ಎಂದು ಭಕ್ತರು ಘೋಷಣೆ ಕೂಗಿದ್ದಾರೆ. ಶಿವಾಜಿ ವೃತ್ತ, ಗಾಂಧಿ ಚೌಕ, ಸಿದ್ದೇಶ್ವರ ದೇವಸ್ಥಾನದ ಬಳಿ ಜನಸಾಗರವೇ ನೆರೆದಿದೆ. ಅಗಲಿದ ಸಂತನಿಗೆ ಲಕ್ಷಾಂತರ ಭಕ್ತರು ಭಾವಪೂರ್ಣ ವಿದಾಯ ಹೇಳಿದ್ದಾರೆ.