alex Certify BJPಯ ‘ಬಿ’ ಟೀಂ ಆಗಿದ್ದರೆ 5 ವರ್ಷ ಸಿಎಂ ಆಗ್ತಿದ್ದೆ ಎಂದ ಮಾಜಿ ಸಿಎಂ: HDK ಹೇಳಿಕೆಗೆ ತಿರುಗೇಟು ನೀಡಿದ ಸಿಎಂ ಸಿದ್ದರಾಮಯ್ಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BJPಯ ‘ಬಿ’ ಟೀಂ ಆಗಿದ್ದರೆ 5 ವರ್ಷ ಸಿಎಂ ಆಗ್ತಿದ್ದೆ ಎಂದ ಮಾಜಿ ಸಿಎಂ: HDK ಹೇಳಿಕೆಗೆ ತಿರುಗೇಟು ನೀಡಿದ ಸಿಎಂ ಸಿದ್ದರಾಮಯ್ಯ

ಚಾಮರಾಜನಗರ: ಈಗ ಜೆಡಿಎಸ್ ನವರು ಯಾರ ಜೊತೆ ಹೋಗಿದ್ದಾರೆ. ಜೆಡಿಎಸ್ ಅಂದರೆ ಜಾತ್ಯಾತೀತ ಅಂತಾರೆ. ಈಗ ಆ ಪರಿಸ್ಥಿತಿ ಇದೆಯಾ? ಎಂದು ಸಿಎಂ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

ಚಾಮರಾಜನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಬಿಜೆಪಿ ಬಿ ಟೀಂ ಆಗಿದ್ದರೆ 5 ವರ್ಷ ಸಿಎಂ ಆಗಿರುತ್ತಿದ್ದೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ. ಜೆಡಿಎಸ್ ನವರು ಈಗ ಯಾರೊಂದಿಗೆ ಹೋಗಿದ್ದಾರೆ. ಮೊದಲು ಜಾತ್ಯಾತೀತ ಪದವನ್ನು ಜೆಡಿಎಸ್ ತೆಗೆದುಹಾಕಬೇಕು. ಜಾತ್ಯಾತೀತ ಅಂದರೆ ಅದರ ಅರ್ಥವೇನು? ಎಂದು ಹೇಳಲಿ ಎಂದು ವಾಗ್ದಾಳಿ ನಡೆಸಿದ್ದಾರೆ.

2018ರಲ್ಲಿ ಬಿಜೆಪಿ ಜೊತೆ ಆಗಲೇ ಮೈತ್ರಿ ಮಾಡಿಕೊಂಡಿದ್ದರೆ 5 ವರ್ಷ ಮುಖ್ಯಮಂತ್ರಿಯಾಗಿರುತ್ತಿದ್ದೆ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹೇಳಿಕೆ ನೀಡಿದ್ದರು. ಈ ಹಿನ್ನೆಲೆಯಲಿ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...