ಬಾಗಲಕೋಟೆ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೀಡಿದ್ದ ಹಣವನ್ನು ಮಹಿಳೆಯ ವಾಪಸ್ ಎಸೆದಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಿಳೆಯ ಕುಟುಂಬಸ್ಥರು ಸಿದ್ದರಾಮಯ್ಯನವರ ಕ್ಷಮೆ ಕೇಳಿದ್ದಾರೆ.
ತಪ್ಪಾಗಿದೆ ಕ್ಷಮಿಸಿ ಎಂದು ಮಹಿಳೆಯ ಕುಟುಂಬದವರು ವಿಷಾದ ವ್ಯಕ್ತಪಡಿಸಿದ್ದಾರೆ. ಕೆರೂರು ಗಲಾಟೆಯಲ್ಲಿ ಗಾಯಗೊಂಡಿದ್ದ ಮೊಹಮ್ಮದ್ ಹನೀಫ್ ಅವರ ಪತ್ನಿ ವಿಷಾದ ವ್ಯಕ್ತಪಡಿಸಿದ್ದಾರೆ.
.ಘಟನೆಯಿಂದ ನೊಂದಿದ್ದೆವು. ನಮಗೆ ಯಾರೂ ಆಗಿರಲಿಲ್ಲ. ಹೀಗಾಗಿ ಸಿದ್ದರಾಮಯ್ಯ ಭೇಟಿ ಮಾಡಿದಾಗ ಆ ರೀತಿ ಮಾತನಾಡಿದ್ದೇವೆ. ನಮ್ಮ ಮೇಲೆ ಹಲ್ಲೆ ಮಾಡಿದ ಬಗ್ಗೆ ಇನ್ನೂ ಸರಿಯಾಗಿ ತನಿಖೆ ನಡೆದಿಲ್ಲ. ಯಾರು ತಪ್ಪು ಮಾಡಿದ್ದಾರೆ ಅವರಿಗೆ ಶಿಕ್ಷೆ ಆಗಲಿ ಎಂದು ಮಾತನಾಡಿದ್ದೇವೆ ಎಂದಿದ್ದಾರೆ.
ನಮ್ಮ ಸಲುವಾಗಿ ಬಂದಿದ್ದೀರಿ. ವೈಯಕ್ತಿಕವಾಗಿ ಹಣ ಸಹಾಯ ಮಾಡಿದ್ದೀರಿ. ಹಣದ ಸಹಾಯ ಬೇಡವೆಂದು ವಾಪಸ್ ನೀಡಲು ಕಾರ್ ಬಳಿ ಬಂದಿದ್ದೆ. ಆಗ ಕಾರ್ ಮುಂದೆ ಹೋಗಿದ್ದು, ಹಣ ನೀಡಲು ನಮ್ಮ ಅಕ್ಕ ಓಡಿ ಹೋದರು. ಈ ವೇಳೆ ಕೈಯಲ್ಲಿದ್ದ ಹಣ ಜಾರಿ ಕೆಳಗೆ ಬಿದ್ದಿದೆ. ತಪ್ಪಾಗಿದೆ ಕ್ಷಮಿಸಿ. ಮತ್ತೊಮ್ಮೆ ನಮ್ಮ ಸಿದ್ದರಾಮಯ್ಯ ಗೆದ್ದು ಬರಲಿ ಎಂದು ಮಹಿಳೆ ಸಿದ್ಧರಾಮಯ್ಯನವರಿಗೆ ಕ್ಷಮೆ ಕೇಳಿದ್ದಾರೆ. ನಿನ್ನೆ ಹಣ ಎಸೆದಿದ್ದ ಮಹಿಳೆ ಸಹೋದರಿ ಈ ಬಗ್ಗೆ ಹೇಳಿದ್ದಾರೆ. ಈ ಮೂಲಕ ಹಣ ಎಸೆದಿದ್ದಕ್ಕೆ ಗಾಯಾಳು ಕುಟುಂಬದ ಮಹಿಳೆಯರು ಕ್ಷಮೆ ಕೇಳಿದ್ದಾರೆ. ಕೆರೂರು ಗುಂಪು ಘರ್ಷಣೆಯಲ್ಲಿ ಹನೀಫ್ ಮತ್ತು ರಫೀಕ್ ಗಾಯಗೊಂಡಿದ್ದರು. ನಿನ್ನೆ ಬಾಗಲಕೋಟೆ ನಗರದ ಖಾಸಗಿ ಆಸ್ಪತ್ರೆ ಸಿದ್ಧರಾಮಯ್ಯ ಆರೋಗ್ಯ ವಿಚಾರಿಸಲು ಬಂದಾಯ ಘಟನೆ ನಡೆದಿತ್ತು. ಇದಕ್ಕಾಗಿ ಕುಟುಂಬದ ಮಹಿಳೆಯರು ವಿಷಾದ ವ್ಯಕ್ತಪಡಿಸಿದ್ದಾರೆನ್ನಲಾಗಿದೆ.