
ಚಿತ್ರದರ್ಗ: ಲೋಕಸಭಾ ಚುನವಣೆ ಹಿನ್ನೆಲೆಯಲ್ಲಿ ಬಿಜೆಪಿ- ಜೆಡಿಎಸ್ ಮೈತ್ರಿ ವಿಚಾರವಾಗಿ ಕಿಡಿಕಾರಿರುವ ಸಿಎಂ ಸಿದ್ದರಾಮಯ್ಯ ಅವರದ್ದು ಅಪವಿತ್ರ ಮೈತ್ರಿ ಎಂದು ಹೇಳಿದ್ದಾರೆ.
ಚಿತ್ರದುರ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಜೆಡಿಎಸ್ ನವರು ಪಕ್ಷ ಉಳಿವಿಗಾಗಿ ಸಿದ್ಧಾಂತಗಳನ್ನೇ ಗಾಳಿಗೆ ತೂರಿ ಕೋಮುವಾದಿ ಪಕ್ಷದ ಜೊತೆ ಕೈಜೋಡಿಸಿದ್ದಾರೆ. ಜಾತ್ಯಾತೀತ ಜನತಾದಳ ಎಂದು ಹೇಳಿಕೊಂಡು ಕೋಮುವಾದಿ ಪಕ್ಷದ ಜೊತೆ ಮೈತ್ರಿ ಮಾಡಿಕೊಂಡಿರುವುದು ಅಪವಿತ್ರ ಮೈತ್ರಿ ಎಂದು ಹೇಳಿದರು.
ಮೈತ್ರಿ ಬಗ್ಗೆ ಎರಡೂ ಪಕ್ಷದ ಶಾಸಕರಲ್ಲಿಯೇ ಅಸಮಾಧಾನವಿದೆ. ನಾಯಕರುಗಳೇ ಬಹಿರಂಗವಾಗಿ ಬೇಸರ ಹೊರಹಾಕುತ್ತಿದ್ದಾರೆ ಎಂದು ಹೇಳಿದರು.