ಕಾಂಗ್ರೆಸ್ ಪಕ್ಷ ಹಗರಣ ಮಾಡಲೆಂದೇ ಅಧಿಕಾರಕ್ಕೆ ಬಂದಿದ್ದೋ ಎಂಬ ರೀತಿಯಲ್ಲಿ ಭ್ರಷ್ಟರಾಮಯ್ಯ ಸರ್ಕಾರ ಆಡಳಿತ ನಡೆಸಿತ್ತು. ಹಗರಣಗಳ ಸರಮಾಲೆಯನ್ನೇ ಕೊರಳಿಗೆ ಹಾಕಿ ಓಡಾಡಿದ ಖ್ಯಾತಿ ಕಾಂಗ್ರೆಸ್ ಸರ್ಕಾರಕ್ಕೆ ಸಲ್ಲುತ್ತದೆ ಎಂದು ಬಿಜೆಪಿ ಟ್ವೀಟ್ ಮಾಡಿದೆ.
ರಾಶಿ ರಾಶಿ ಹಗರಣಗಳ ಅನಭಿಷಿಕ್ತ ದೊರೆ ಎಂದರೆ ಅದು ರೀಡುರಾಮಯ್ಯ. ಅನ್ನಭಾಗ್ಯ ಅಕ್ಕಿ ಕಳವು, ಅರ್ಕಾವತಿ ರೀಡೂ ಹಗರಣ, ಹಾಸಿಗೆ ತಲೆದಿಂಬು ಖರೀದಿ ಹಗರಣ, ಕಲ್ಲು ಗಣಿಕಾರಿಕೆ, ಮರಳು ದಂಧೆ, ಟ್ರಾನ್ಸ್ ಫರ್ ದಂಧೆಯಲ್ಲಿ ಭ್ರಷ್ಟರಾಮಯ್ಯ ಅವರೇ ಪಡೆದ ಕಮೀಷನ್ ಎಷ್ಟು? ಎಂದು ಪ್ರಶ್ನಿಸಲಾಗಿದೆ.
ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಬಿಬಿಎಂಪಿಯನ್ನು ತಮ್ಮ ಎಟಿಎಂ ರೀತಿ ಬಳಸಿದ್ದ ಕೆ.ಜೆ ಜಾರ್ಜ್ ಅವರು ಅವರ ಪಾಲಿನ ಎಟಿಎಂ ಆಗಿದ್ದರು. ಬಿಬಿಎಂಪಿಯಲ್ಲಿ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ 1400 ಕೋಟಿ ಹಗರಣ ನಡೆದಿತ್ತು. ಈ ಎಲ್ಲಾ ಹಗರಣಗಳಿಗೂ ಕಾವಲುಗಾರನಾಗಿದ್ದು ನೀವಲ್ಲವೇ ಭ್ರಷ್ಟರಾಮಯ್ಯ? ಎಂದು ಟ್ವೀಟ್ ಮಾಡಲಾಗಿದೆ.
ಕಾಂಗ್ರೆಸ್ ಸರ್ಕಾರದಲ್ಲಿ ಸಚಿವರು ಖಾತೆ ನಿರ್ವಹಣೆ ಮಾಡುವ ಬದಲು ತಮ್ಮ ಖಾತೆ ಭರ್ತಿ ಮಾಡಿಕೊಂಡಿದ್ದರು. ವೈಟ್ ಟ್ಯಾಪಿಂಗ್ ಹಗರಣ, ಹೈಕಮಾಂಡ್‌ಗೆ 119 ಕೋಟಿ ಕಪ್ಪ ಪಾವತಿ, ಕೆಂಪೇಗೌಡ ಲೇಔಟ್ ಟೆಂಡರ್‌ನಲ್ಲಿ 25% ಕಮಿಷನ್, ಭ್ರಷ್ಟರಾಮಯ್ಯ ಅವರೇ, ನಿಮ್ಮದು 100% ಕಮಿಷನ್ ಸರ್ಕಾರ ಎಂದು ಈಗಾದರೂ ಒಪ್ಪುವಿರಾ ಎಂದು ಬಿಜೆಪಿ ಟೀಕಿಸಿದೆ.
ಹುಟ್ಟುಗುಣ ಸುಟ್ಟರೂ ಹೋಗುವುದಿಲ್ಲ ಎನ್ನುವ ಗಾದೆ ಮಾತಿನಂತೆ, ಕಾಂಗ್ರೆಸ್ ಪಕ್ಷ ಹುಟ್ಟುತ್ತಲೇ ಮಾಡಿದ ಮಹಾನ್ ಸಾಧನೆ ಎಂದರೆ ಅದು ಭ್ರಷ್ಟಾಚಾರ. ಕಾಂಗ್ರೆಸ್ ಹುಟ್ಟುಗುಣವನ್ನು ದೇಶದಲ್ಲಿ ಸೋನಿಯಾ, ರಾಹುಲ್ ಗಾಂಧಿ ಮುಂದುವರೆಸಿದರೆ ರಾಜ್ಯದಲ್ಲಿ ಅದರ ಜವಾಬ್ದಾರಿಯನ್ನು ಡಿ.ಕೆ. ಶಿವಕುಮಾರ್ ಹೊತ್ತಿದ್ದಾರೆ.
ಬಿಜೆಪಿ ಅಧಿಕಾರಕ್ಕೆ ಬರುತ್ತಲೇ ನದಿ-ಕೆರೆಗಳು ತುಂಬುತ್ತವೆ. ಸಿದ್ಧರಾಮಯ್ಯ ಅಧಿಕಾರಕ್ಕೆ ಬಂದಿದ್ದಾಗ ತುಂಬಿ ತುಳುಕಿದ್ದು ನದಿಗಳಲ್ಲ, ಬದಲಿಗೆ ಹಗರಣಗಳು. ಹಾಗೆ ಕಾಂಗ್ರೆಸ್ ಪಕ್ಷದ ಹಲವು ಹಗರಣಗಳ ಪೈಕಿ ಅರ್ಕಾವತಿಯೂ ಒಂದು. ಮಧ್ಯಮ ವರ್ಗದ ಕನ್ನಡಿಗರ ಮನೆ ಕಟ್ಟುವ ಕನಸಿಗೆ ಕೊಳ್ಳಿ ಇಟ್ಟಿದ್ದು ಅಕ್ಷಮ್ಯ ಎಂದು ದೂರಲಾಗಿದೆ.