ಬೆಂಗಳೂರು: ನೂತನ ಸಚಿವ ಸಂಪುಟದ ವಿರುದ್ಧ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವ್ಯಂಗ್ಯವಾಡಿದ್ದಾರೆ. ಸಂಪುಟ ರಚನೆ ಎನ್ನುವುದು ಬೆಟ್ಟ ಅಗೆದು ಇಲಿ ಹಿಡಿದಂತೆ ಆಗಿದೆ. ಬಿನ್ನಮತ ಎದ್ದಿರುವುದು ಮಧ್ಯಂತರ ಚುನಾವಣೆಯ ಸೂಚನೆಯಾಗಿದೆ ಎಂದು ಹೇಳಿದ್ದಾರೆ.
ನೂತನ ಸಂಪುಟದಲ್ಲಿ ದಲಿತ ಸಮುದಾಯವನ್ನು ಕಡೆಗಣಿಸಲಾಗಿದೆ. ಸಂಪುಟ ರಚನೆ ಭಿನ್ನಮತೀಯರನ್ನು ತೃಪ್ತಿಗೊಳಿಸುವ ಸರ್ಕಸ್ ಆಗಿದೆ. ಎಲ್ಲರನ್ನೂ ಓಲೈಸಲು ಯತ್ನಿಸಿದ ಮುಖ್ಯಮಂತ್ರಿಯಾಗಿದ್ದಾರೆ. ಸ್ವಚ್ಚ ರಾಜಕಾರಣದ ಧನಾತ್ಮಕ ಅಂಶಗಳು ಇದರಲ್ಲಿ ಕಾಣುತ್ತಿಲ್ಲ. ಮೊಟ್ಟೆ ಹಗರಣದ ಶಶಿಕಲಾ ಜೊತೆಗೆ ಸಚಿವ ಸ್ಥಾನ ನೀಡಿರುವುದು ನೈತಿಕ ದಿವಾಳಿತನಕ್ಕೆ ಸಾಕ್ಷಿ ಎಂದು ಟೀಕಿಸಿದ್ದಾರೆ.