ಬೆಂಗಳೂರು: ಲೋಕಸಭಾ ಚುನಾವಣಾ ಅಖಾಡ ಕಾವೇರಿದ್ದು, ರಾಜ್ಯಕೀಯ ನಾಯಕರ ವಾಕ್ಸಮರ ಜೋರಾಗಿದೆ. ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸೌಮ್ಯಾ ರೆಡ್ಡಿ ಪರ ಪ್ರಚಾರ ನಡೆಸಿದ ಸಿಎಂ ಸಿದ್ದರಾಮಯ್ಯ, ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಸಂಸತ್ತಿನಲ್ಲಿ ರಾಜ್ಯದ ಜನರ ಪರ ಧ್ವನಿ ಎತ್ತದ ತೇಜಸ್ವಿ ಸೂರ್ಯ ಯಾವ ಮುಖವಿಟ್ಟು ಜನರ ಬಳಿ ಮತ ಕೇಳುತ್ತಿದ್ದಾರೆ? ಸಂಸದರಾಗಿ ಆಯ್ಯೆಯಾಗಿದ್ದ ತೇಜಸ್ವಿ ಸೂರ್ಯ ಯಾವುದೇ ಅಭಿವೃದ್ಧಿಕಾರ್ಯವನ್ನೂ ಮಾಡಿಲ್ಲ. ರಾಜ್ಯದ ಜನರ ಪರವಾಗಿ ಪಾರ್ಲಿಮೆಂಟ್ ಅಲ್ಲಿ ಮಾತನಾಡಿಲ್ಲ ಎಂದು ಕಿಡಿಕಾರಿದ್ದಾರೆ
ಬೆಂಗಳೂರಿನ ಕುಡಿಯುವ ನೀರಿಗೆ ಮೇಕೆದಾಟು ಯೋಜನೆಯಾಗಬೇಕು. ಕೇಂದ್ರದಲ್ಲಿ ಮೇಕೆದಾಟುಗೆ ಅನುಮತಿ ಸಿಗಬೇಕಾದ್ರೆ ಕಾಂಗ್ರೆಸ್ ಅಭ್ಯರ್ಥಿ ಸೌಮ್ಯರೆಡ್ಡಿ ಗೆಲ್ಲಬೇಕು. ಬೆಂಗಳೂರು ದಕ್ಷಿಣದಲ್ಲಿ ಕುಡಿಯುವ ನೀರಿಗೆ ಕಾವೇರಿ ಸಂಪರ್ಕ ಇನ್ನಷ್ಟು ಆಗಬೇಕಿದೆ. ಈಗ ಆಗಿರುವುದು ಶೇ60 ರಷ್ಟು ಮಾತ್ರ. ಆದ್ದರಿಂದ ಮೇಕೆದಾಟು ಯೋಜನೆ ಜಾರಿಯಾಗಬೇಕಾದರೆ ಸೌಮ್ಯರೆಡ್ಡಿ ಅವರ ಗೆಲುವು ಅತ್ಯಗತ್ಯ ಎಂದು ಹೇಳಿದರು.