ಬೆಂಗಳೂರು: ಕೆಪಿಟಿಸಿಎಲ್ ಕಿರಿಯ ಇಂಜಿನಿಯರ್ ನೇಮಕಾತಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂಧನ ಸಚಿವ ವಿ. ಸುನಿಲ್ ಕುಮಾರ್ ಮಾಧ್ಯಮ ಪ್ರಕಟಣೆ ನೀಡಿದ್ದಾರೆ.
ಸಿದ್ದರಾಮಯ್ಯ ಹೇಳಿಕೆಗೆ ಸಚಿವ ಸುನಿಲ್ ಕುಮಾರ್ ತಿರುಗೇಟು ನೀಡಿದ್ದಾರೆ. ಸುಳ್ಳು ನಿಮ್ಮ ಮನೆದೇವರೋ? ಕೌಟುಂಬಿಕ ಆಸ್ತಿಯೋ ಎಂದು ಪ್ರಶ್ನಿಸಿದ್ದಾರೆ.
ಸಿದ್ದರಾಮಯ್ಯನವರಿಗೆ ನೇರ ಸವಾಲು ಹಾಕಲು ಬಯಸುತ್ತೇನೆ. ನಿಮ್ಮ ಆಪಾದನೆ ಸುಳ್ಳನ್ನೇ ಸತ್ಯವನ್ನಾಗಿಸುವ ವಿಫಲ ಯತ್ನವಾಗಿದೆ. ಕತ್ತಲೆಯಲ್ಲಿ ಕಪ್ಪು ಬೆಕ್ಕು ಹುಡುಕುವ ವ್ಯರ್ಥ ಸಾಹಸ ಮಾಡಬೇಡಿ. ನೀವು ಆರೋಪಿಸಿದ ರೀತಿ ಯಾವುದೇ ಹಗರಣ ನಡೆದಿಲ್ಲ. ನಾನಾಗಲಿ, ನನ್ನ ಕಚೇರಿ ಸಿಬ್ಬಂದಿಯಾಗಲಿ ಅಕ್ರಮ ನಡೆಸಿಲ್ಲ. ನಿಮ್ಮ ಬಳಿ ದಾಖಲೆ ಇದ್ದರೆ ನೀಡಿ, ತನಿಖೆಗೆ ನಾವು ಸಿದ್ಧವಿದ್ದೇವೆ. ದಾಖಲೆ ನೀಡುವಲ್ಲಿ ವಿಫಲವಾದರೆ ನಿಮ್ಮ ಸವಾಲೇನು ಎಂದು ಪ್ರಶ್ನಿಸಿದ್ದಾರೆ.