alex Certify ಕರ್ನಾಟಕದ ಮುಂದಿನ ಸಿಎಂ ಯಾರಾಗಬೇಕೆಂದು ಬಯಸುತ್ತಾರೆ ಜನ ? ಇಲ್ಲಿದೆ ND TV ಸಮೀಕ್ಷಾ ವರದಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕರ್ನಾಟಕದ ಮುಂದಿನ ಸಿಎಂ ಯಾರಾಗಬೇಕೆಂದು ಬಯಸುತ್ತಾರೆ ಜನ ? ಇಲ್ಲಿದೆ ND TV ಸಮೀಕ್ಷಾ ವರದಿ

ರಾಜ್ಯ ವಿಧಾನಸಭೆ ಚುನಾವಣೆ ಸಮೀಪಿಸಿದ್ದು, ಮುಂದಿನ ಮುಖ್ಯಮಂತ್ರಿ ಯಾರು ಎಂಬ ಕುತೂಹಲ ಎಲ್ಲರಲ್ಲಿ ಮನೆಮಾಡಿದೆ. ಚುನಾವಣಾ ಪೂರ್ವ ಸಮೀಕ್ಷೆಯ ಪ್ರಕಾರ, ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ರಾಜ್ಯದಲ್ಲಿ ಅತ್ಯಂತ ಆದ್ಯತೆಯ ಮುಖ್ಯಮಂತ್ರಿ ಎಂದು ತಿಳಿದುಬಂದಿದೆ. ಎನ್‌.ಡಿ ಟಿವಿ ಮತ್ತು ಲೋಕನೀತಿ-ಸಿಎಸ್‌ಡಿಎಸ್ ನಡೆಸಿದ ಸಮೀಕ್ಷೆಯು ಕರ್ನಾಟಕದ ಮುಂದಿನ ಮುಖ್ಯಮಂತ್ರಿ ರೇಸ್ ನಲ್ಲಿ ಸಿದ್ದರಾಮಯ್ಯ ಅವರೇ ಅಗ್ರಸ್ಥಾನದಲ್ಲಿದ್ದರೆ, ನಂತರದ ಸ್ಥಾನದಲ್ಲಿ ಬಿಜೆಪಿಯ ಬಸವರಾಜ್ ಬೊಮ್ಮಾಯಿ ಇದ್ದಾರೆ.

ಎನ್‌.ಡಿ ಟಿವಿ 82 ಮತಗಟ್ಟೆಗಳಲ್ಲಿ 2,143 ನೋಂದಾಯಿತ ಮತದಾರರಲ್ಲಿ ಏಪ್ರಿಲ್ 20 ರಿಂದ 28 ರವರೆಗೆ ಸಮೀಕ್ಷೆಯನ್ನು ನಡೆಸಿತು. ಹಿರಿಯ ಮತದಾರರಲ್ಲಿ ಸಿದ್ದರಾಮಯ್ಯ ಸ್ವಲ್ಪ ಹೆಚ್ಚು ಜನಪ್ರಿಯತೆ ಪಡೆದಿದ್ದರೆ, ಯುವ ಮತದಾರರು ಬೊಮ್ಮಾಯಿ ಅವರನ್ನು ಸಿಎಂ ಮಾಡಲು ಆದ್ಯತೆ ನೀಡಿದ್ದಾರೆ ಎಂದು ಸಮೀಕ್ಷೆ ತಿಳಿಸಿದೆ.

ಜನತಾ ದಳ ಜಾತ್ಯತೀತ (ಜೆಡಿಎಸ್) ನಾಯಕ ಎಚ್‌.ಡಿ. ಕುಮಾರಸ್ವಾಮಿ ಮತ್ತು ಕಾಂಗ್ರೆಸ್‌ನ ಡಿ.ಕೆ. ಶಿವಕುಮಾರ್ ಕ್ರಮವಾಗಿ ಮೂರು ಮತ್ತು ನಾಲ್ಕನೇ ಅತ್ಯಂತ ಜನಪ್ರಿಯ ಮುಖ್ಯಮಂತ್ರಿ ಅಭ್ಯರ್ಥಿಗಳಾಗಿದ್ದಾರೆ. ನಾಲ್ಕು ಬಾರಿ ಮುಖ್ಯಮಂತ್ರಿಯಾಗಿದ್ದರೂ ಒಂದು ಅವಧಿಯನ್ನೂ ಪೂರ್ಣಗೊಳಿಸದ ಬಿಜೆಪಿಯ ಬಿ.ಎಸ್. ಯಡಿಯೂರಪ್ಪ ಅವರು ಐದನೇ ಸ್ಥಾನ ಪಡೆದಿರುವುದು ಅಚ್ಚರಿ ಮೂಡಿಸಿದೆ.

ಮುಖ್ಯಮಂತ್ರಿ ಹುದ್ದೆಗೆ ಸ್ಪರ್ಧಿಸುವ ವ್ಯಕ್ತಿಗಿಂತ ಪಕ್ಷ ಮತ್ತು ಅಭ್ಯರ್ಥಿ ಮತದಾರರಿಗೆ ಮುಖ್ಯವಾಗಿದೆ ಎಂದು ಸಮೀಕ್ಷೆಯು ಬಹಿರಂಗಪಡಿಸಿದೆ. ಬಹುಪಾಲು ಪ್ರತಿಕ್ರಿಯಿಸಿದವರು (ಶೇ. 56) ಪಕ್ಷವನ್ನು ಪ್ರಮುಖ ಅಂಶವೆಂದು ಪರಿಗಣಿಸಿದರೆ, ಶೇ. 38 ಜನರು ಅಭ್ಯರ್ಥಿಯನ್ನು ಪರಿಗಣಿಸಿದ್ದಾರೆ. ಶೇ. 4 ರಷ್ಟು ಜನರು ಮಾತ್ರ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಆಧರಿಸಿ ಮತ ಚಲಾಯಿಸಲಿದ್ದೇವೆ ಎಂದು ಹೇಳಿದ್ದಾರೆ. ಕರ್ನಾಟಕ ವಿಧಾನಸಭೆ ಚುನಾವಣೆ 2023 ಮೇ 10 ರಂದು ನಡೆಯಲಿದ್ದು, ಮೇ 13 ರಂದು ಮತ ಎಣಿಕೆ ನಡೆಯಲಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...