ಚಿತ್ರದುರ್ಗ: ಅಧಿಕಾರ ದೇಶದ ಸಂಪತ್ತು ಕೆಲವರ ಕೈಲಿ ಮಾತ್ರ ಇರಬಾರದು, ಸರ್ವರಿಗೂ ಹಂಚಿಕೆ ಆಗಬೇಕೆಂಬುದು ಅಂಬೇಡ್ಕರ್ ಅವರ ಆಶಯವಾಗಿತ್ತು. ಅಂಬೇಡ್ಕರ್ ಆಶಯದಲ್ಲಿ ಕಾಂಗ್ರೆಸ್ ಪಕ್ಷ ನಂಬಿಕೆ ಇಟ್ಟಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಚಿತ್ರದುರ್ಗ ಜಿಲ್ಲೆ ಹೊಸದುರ್ಗದ ಬ್ರಹ್ಮವಿದ್ಯಾನಗರದಲ್ಲಿ ಭಗೀರಥ ಉಪ್ಪಾರ ಸಮಾವೇಶದಲ್ಲಿ ಮಾತನಾಡಿದ ಅವರು, ಕೆಲವು ಪಕ್ಷದವರು ಸಂವಿಧಾನಕ್ಕೆ ಮಾರಕವಾಗಿದ್ದಾರೆ. ಸಂವಿಧಾನದ ಆಶಯಕ್ಕೆ ಕೆಲವು ಪಕ್ಷದವರು ವಿರುದ್ಧವಾಗಿದ್ದಾರೆ. ಸಂವಿಧಾನದ ಆಶಯಕ್ಕೆ ವಿರುದ್ಧ ಇರುವವರು ರಾಷ್ಟ್ರ ಭಕ್ತರಲ್ಲ, ಅವರೆಲ್ಲರೂ ರಾಷ್ಟ್ರದ್ರೋಹಿಗಳು ಎಂದು ಕಿಡಿಕಾರಿದ್ದಾರೆ.