ಮೈಸೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಸ್ವಗ್ರಾಮ ಸಿದ್ದರಾಮನಹುಂಡಿಯಲ್ಲಿ ನಡೆದ ಊರ ಜಾತ್ರೆಯಲ್ಲಿ ಪಾಲ್ಗೊಂಡು ಜನರೊಂದಿಗೆ ಕುಣಿದಿದ್ದಾರೆ.
ಸಿದ್ಧರಾಮೇಶ್ವರ, ಚಿಕ್ಕತಾಯಮ್ಮ ಜಾತ್ರೆ ನಡೆದಿದ್ದು, ಜಾತ್ರಾ ಮಹೋತ್ಸವದಲ್ಲಿ ಸ್ನೇಹಿತರು ಬೆಂಬಲಿಗರೊಂದಿಗೆ ಕುಣಿದ ಸಿದ್ದರಾಮಯ್ಯ ಅವರು ಸಿದ್ದರಾಮೇಶ್ವರ ದೇವರಿಗೆ ಪೂಜೆ ಸಲ್ಲಿಸಿದ್ದಾರೆ. ಜಾತ್ರೆಯಲ್ಲಿ ಹೆಚ್ಚಿನ ಜನ ಸೇರಿದ್ದು, ಸಿದ್ದರಾಮಯ್ಯ ಮುಂದಿನ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಗ್ರಾಮಸ್ಥರು ಘೋಷಣೆ ಕೂಗಿದ್ದಾರೆ. ಬೆಂಬಲಿಗರೊಂದಿಗೆ ಸಿದ್ದರಾಮಯ್ಯ ಹೆಜ್ಜೆ ಹಾಕಿದ್ದನ್ನು ಕಂಡ ಅವರ ಪುತ್ರ, ಶಾಸಕ ಡಾ. ಯತಿಂದ್ರ ಖುಷಿಪಟ್ಟಿದ್ದು, ಜನ ಕುಣಿಯುವವರನ್ನು ನೋಡಿ ಉತ್ಸಾಹದಿಂದ ತಂದೆಯವರು ಡ್ಯಾನ್ಸ್ ಮಾಡಿದ್ದಾರೆ ಎಂದು ಹೇಳಿದ್ದಾರೆ.
ನಾನು ಊರ ಜಾತ್ರೆಗೆ ಎಂದಿಗೂ ತಪ್ಪಿಸಿಕೊಳ್ಳುವುದಿಲ್ಲ. ಕೊರೋನಾ ಕಾರಣದಿಂದ ಕಳೆದ ವರ್ಷ ಜಾತ್ರೆ ಮಾಡಿರಲಿಲ್ಲ. ಊರ ಜಾತ್ರೆಗೆ ನೆಂಟರಿಷ್ಟರು, ಬಂಧುಗಳು ಬಂದಿರುತ್ತಾರೆ. ಜನ ಸೇರುತ್ತಾರೆ. ಇಂತಹ ಸಂದರ್ಭದಲ್ಲಿ ಊರಿಗೆ ಬಂದು ಹೋಗುವುದೇ ನಮಗೆ ಖುಷಿ ಎಂದಿದ್ದಾರೆ.