ಚಿಕ್ಕಮಗಳೂರು: ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ವಿರುದ್ಧ ಬಿಜೆಪಿ ನಾಯಕ ಸಿ.ಟಿ. ರವಿ ವಾಗ್ದಾಳಿ ನಡೆಸಿದ್ದಾರೆ.
ಮಾಜಿ ಮುಖ್ಯಮಂತ್ರಿಯೊಬ್ಬರು ಯೋಜನೆ ನಾನೇ ಕೊಟ್ಟೆ ಎಂದು ಹೇಳುತ್ತಾರೆ. ತುಂಬಿದ ಕೊಡ ತುಳುಕುವುದಿಲ್ಲ. ಅರ್ಧಂಬರ್ಧ ತುಂಬಿದ ಕೊಡ ಮಾತ್ರ ಅಲುಗಾಡುತ್ತದೆ. 84 ಕೋಟಿ ಜನರಿಗೆ ಕೇಂದ್ರ ಸರ್ಕಾರ ಉಚಿತವಾಗಿ ರೇಷನ್ ಕೊಟ್ಟಿದೆ. ಪ್ರಧಾನಿ ಮೋದಿಯವರು ಎಂದೂ ಎದೆಬಡಿದುಕೊಂಡಿಲ್ಲ. ನಾನು ಕೊಟ್ಟೆ ನಾನು ಕೊಟ್ಟೆಎಂದು ಎಂದೂ ಎದೆ ಪಡೆದುಕೊಂಡಿಲ್ಲ ಎಂದರು.
ಅನ್ನಭಾಗ್ಯ ಯೋಜನೆಗೆ ಕೇಂದ್ರ ಸರ್ಕಾರ ಶೇಕಡ 90 ರಷ್ಟು ಹಣ ಕೊಡುತ್ತಿತ್ತು. 10 ಪರ್ಸೆಂಟ್ ಹಣ ಮಾತ್ರ ರಾಜ್ಯ ಸರ್ಕಾರ ಭರಿಸುತ್ತಿತ್ತು. 32 ರೂಪಾಯಿಯಲ್ಲಿ 29 ರೂಪಾಯಿಯನ್ನು ಕೇಂದ್ರ ಸರ್ಕಾರ ನೀಡುತ್ತಿತ್ತು. ಯೋಜನೆಗೆ ಕಾಂಗ್ರೆಸ್ ಸರ್ಕಾರ ಇದ್ದಾಗ 3 ರೂಪಾಯಿ ಕೊಡುತ್ತಿತ್ತು. 29 ರೂಪಾಯಿ ಕೊಟ್ಟವರು ನಾನು ಕೊಟ್ಟೆ ಅಂತ ಎಂದೂ ಹೇಳಲಿಲ್ಲ ಎಂದು ಚಿಕ್ಕಮಗಳೂರಿನಲ್ಲಿ ಸಿದ್ದರಾಮಯ್ಯ ವಿರುದ್ಧ ಸಿ.ಟಿ. ರವಿ ವಾಗ್ದಾಳಿ ನಡೆಸಿದ್ದಾರೆ.