
ತುಮಕೂರು: ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮೀಸಲಾತಿ ಪ್ರಮಾಣವನ್ನು ಶೇಕಡ 50 ರಿಂದ ಶೇಕಡ 75 ಕ್ಕೆ ಹೆಚ್ಚಿಸಲಾಗುವುದು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ತುಮಕೂರು ಜಿಲ್ಲೆಯ ಮಧುಗಿರಿಯಲ್ಲಿ ಮಾತನಾಡಿದ ಅವರು, ಲಿಂಗಾಯತ, ಒಕ್ಕಲಿಗ, ದಲಿತರು, ಹಿಂದುಳಿದ ಸಮುದಾಯ ಹಾಗೂ ಮುಸ್ಲಿಮರಿಗೆ ಮೀಸಲಾತಿ ನೀಡುತ್ತೇವೆ. ನಾವು ಅಧಿಕಾರಕ್ಕೆ ಬಂದ ಮೇಲೆ ಎರಡೇ ವರ್ಷಕ್ಕೆ ಕೆರೆಗಳಿಗೆ ನೀರು ಹರಿಸುತ್ತೇವೆ. ಎತ್ತಿನ ಹೊಳೆ ಯೋಜನೆಯಿಂದ 54 ಕೆರೆಗಳಿಗೆ ನೀರು ಹರಿಸುತ್ತೇವೆ ಎಂದು ಹೇಳಿದ್ದಾರೆ.
ನಾನು ಶಾಲೆಗೆ ಹೋಗುವಾಗ ಚಪ್ಪಲಿ ಒಲೆಸಿದ್ದೆ. ಅದು ಮೂರು ವರ್ಷ ಬಂತು. ಕೆ.ಎನ್. ರಾಜಣ್ಣ ಶೂ ಭಾಗ್ಯ ಸಲಹೆ ಕೊಟ್ಟಾಗ ಶಾಲೆಗೆ ಹೋಗುತ್ತಿದ್ದ ಕಾಲ ನೆನಪಾಯಿತು. ನಾನು ಹೈಸ್ಕೂಲ್ ವರೆಗೂ ಚಪ್ಪಲಿ ಹಾಕಿಕೊಂಡಿರಲಿಲ್ಲ ಎಂದು ಶಾಲಾ ದಿನಗಳ ಬಗ್ಗೆ ಸಿದ್ದರಾಮಯ್ಯ ನೆನಪು ಮಾಡಿಕೊಂಡಿದ್ದಾರೆ.