ಹಾಸನ: ನಾವು ಏನೇ ಟೀಕೆ ಮಾಡಿದರೂ ಮುಖ್ಯಮಂತ್ರಿಗಳು ಲಘುವಾಗಿ ಪರಿಗಣಿಸುತ್ತಾರೆ ಎಂದು ಸಿದ್ದರಾಮಯ್ಯ ಹೇಳಿಕೆಗೆ ಸಿಎಂ ತಿರುಗೇಟು ನೀಡಿದ್ದಾರೆ.
ಹಾಸನ ಜಿಲ್ಲೆ ಬೇಲೂರು ತಾಲೂಕಿನ ಮಾರಗೊಂಡನಹಳ್ಳಿ ಹೆಲಿಪ್ಯಾಡ್ ನಲ್ಲಿ ಮಾತನಾಡಿದ ಸಿಎಂ, ಯಾರು ಏನು ಮಾತನಾಡುತ್ತಾರೆ ಎನ್ನುವುದನ್ನು ಜನರು ತೀರ್ಮಾನಿಸುತ್ತಾರೆ. ಸತ್ಯ ಏನು ಎನ್ನುವುದು ಎಲ್ಲರಿಗೂ ಗೊತ್ತಾಗುತ್ತದೆ ಎಂದು ಹೇಳಿದ್ದಾರೆ.
ಅವರ ಕಾಲದಲ್ಲಿ ನಡೆದಿರುವುದರ ಬಗ್ಗೆ ದಾಖಲೆ ಬಿಡುಗಡೆ ಮಾಡುತ್ತಿದ್ದೇವೆ. ಸತ್ಯವನ್ನು ಎದುರಿಸುವ ಕೆಲಸವನ್ನು ಸಿದ್ದರಾಮಯ್ಯ ಮಾಡಲಿ. ನಮ್ಮ ಕಾಲದಲ್ಲಿ ಆಗಿಲ್ಲ. ಆಗಿದ್ರೆ ಏನಾಯ್ತು ಅನ್ನೋದು ಜವಾಬ್ದಾರಿಯಲ್ಲ. ನಾವು ಏನು ಹೇಳಿದ್ದೆವೆಯೋ ಅದರ ದಾಖಲೆ ಕೊಡುತ್ತಿದ್ದೇವೆ. ಅದನ್ನು ಎದುರಿಸಲಿ ಎಂದು ಹೇಳಿದ್ದಾರೆ.