alex Certify ಮೋದಿ ಸರ್ಕಾರದಲ್ಲಿ ಅಗತ್ಯ ವಸ್ತು ಬೆಲೆ ಹೆಚ್ಚಳ: ಸಿದ್ಧರಾಮಯ್ಯ ಆರೋಪ; ಇನ್ನೂ 5 ವರ್ಷ GST ಪರಿಹಾರ ಮುಂದುವರೆಸಲು ಆಗ್ರಹ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮೋದಿ ಸರ್ಕಾರದಲ್ಲಿ ಅಗತ್ಯ ವಸ್ತು ಬೆಲೆ ಹೆಚ್ಚಳ: ಸಿದ್ಧರಾಮಯ್ಯ ಆರೋಪ; ಇನ್ನೂ 5 ವರ್ಷ GST ಪರಿಹಾರ ಮುಂದುವರೆಸಲು ಆಗ್ರಹ

ಬೆಂಗಳೂರು: ಮೋದಿ ಸರ್ಕಾರ ಬಂದ ಮೇಲೆ ಅಗತ್ಯವಸ್ತುಗಳ ಬೆಲೆ ಹೆಚ್ಚಳವಾಗಿದ್ದು, ನಾವು ಅಧಿಕಾರಕ್ಕೆ ಬಂದರೆ ಬೆಲೆ ನಿಯಂತ್ರಣ ಮಾಡುತ್ತೇವೆ ಎಂದು ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿದ ಅವರು, ಜಿಎಸ್ಟಿ ಪರಿಹಾರ ಈ ವರ್ಷ ಮುಕ್ತಾಯ ಆಗುತ್ತಿದೆ. ಇದನ್ನು ಇನ್ನೂ ಐದು ವರ್ಷಗಳ ಕಾಲ ಮುಂದುವರೆಸಬೇಕು ಎಂದು ಒತ್ತಾಯಿಸಿದ್ದಾರೆ.

ಪ್ರತಿವರ್ಷ 19 ಸಾವಿರ ಕೋಟಿ ರೂ. ರಾಜ್ಯಕ್ಕೆ ಬರುತ್ತಿತ್ತು. ಕೇಂದ್ರ ಸರ್ಕಾರ ಈ ಬಾರಿ ಬಜೆಟ್ ಅಥವಾ ಮೌಖಿಕವಾಗಿ ಹೇಳಿಲ್ಲ. ಹೀಗಾಗಿ ಜಿಎಸ್ಟಿ ಪರಿಹಾರ ಮುಂದುವರೆಸಬೇಕು ಎಂದು ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.

ಜಿಎಸ್ಟಿ ಬರುವ ಬದಲು ಮೊದಲು ನಮ್ಮ ಬೆಳವಣಿಗೆ ಶೇ 14 ರಷ್ಟು ಇತ್ತು. ಈಗ ಕೇವಲ ಶೇಕಡ 6 ರಷ್ಟು ಆಗಿದೆ ಎಂದು ಹೇಳಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...