
ತಾನು ತುಂಬಾ ಅಸ್ವಸ್ಥನಾಗಿರುವುದರಿಂದ ತಡವಾಗಿ ಆರ್ಡರ್ ಮಾಡಿದ್ದಾಗಿ ಪತ್ರದಲ್ಲಿ ತಿಳಿಸಿದ್ದಾರೆ. ಅಂಗಡಿಯನ್ನು ಮುಚ್ಚಲು ಪ್ರಯತ್ನಿಸುತ್ತಿರಬಹುದು, ಸಿಬ್ಬಂದಿಗೆ ತೊಂದರೆ ಆಗುವುದಾದರೆ ಆದೇಶ ರದ್ದುಪಡಿಸುವಂತೆ ಕೋರಿದ್ದಾರೆ.
ಆಶ್ಚರ್ಯಕರವಾದ ರೀತಿಯಲ್ಲಿ ವ್ಯಕ್ತಿಗೆ ರೆಸ್ಟೋರೆಂಟ್ ಯಾವುದೇ ಬೇಸರವಿಲ್ಲದೆ ಆಹಾರ ಕಳುಹಿಸಿದೆ. ಜೊತೆಗೆ ಉಚಿತ ಬ್ರೆಡ್ ಅನ್ನು ಕಳುಹಿಸಿಕೊಟ್ಟಿದ್ದಾರೆ.
ಆಹಾರ ಕಳುಹಿಸುವುದರ ಜೊತೆಗೆ ರೆಸ್ಟೋರೆಂಟ್ ಕೂಡ ವ್ಯಕ್ತಿಗೆ ಪತ್ರ ಬರೆದಿದೆ. ಉತ್ತಮವಾದ ಟಿಪ್ಪಣಿ ಕಳುಹಿಸಿದ್ದಕ್ಕೆ ಧನ್ಯವಾದ ತಿಳಿಸಿದೆ. ಅಲ್ಲದೆ, ತಡವಾಗಿ ಆರ್ಡರ್ ಮಾಡುವ ಬಗ್ಗೆ ಒತ್ತು ನೀಡಬೇಡಿ, ಈ ಬಗ್ಗೆ ಯಾವುದೇ ಅಭ್ಯಂತರವಿಲ್ಲ ಎಂದು ಧನ್ಯವಾದ ತಿಳಿಸಿದೆ.
ಹೋಟೆಲ್ ಸಿಬ್ಬಂದಿಯ ಹೃದಯಸ್ಪರ್ಶಿ ಪತ್ರದಿಂದ ವ್ಯಕ್ತಿಗೆ ಮತ್ತಷ್ಟು ಸಂತೋಷವಾಗಿದೆ. ಗೂಗಲ್ ನಲ್ಲಿ ರೆಸ್ಟೋರೆಂಟ್ ಬಗ್ಗೆ ಉತ್ತಮ ವಿಮರ್ಶೆ ಬರೆದಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿರುವಾಗ ಉಚಿತ ಗಾರ್ಲಿಕ್ ಬ್ರೆಡ್ ನೀಡಿದ್ದಲ್ಲದೆ, ಮುದ್ದಾದ ಪತ್ರ ಕಳುಹಿಸಿಕೊಟ್ಟಿದ್ದಾರೆ. ವೈಯಕ್ತಿಕವಾಗಿ ಪ್ರತಿಯೊಬ್ಬ ಸಿಬ್ಬಂದಿಯ ಹಣೆಗೂ ಮುತ್ತಿಡಬೇಕು ಎಂದೆನಿಸುತ್ತದೆ. ಆಹಾರ ಬಹಳ ಚೆನ್ನಾಗಿತ್ತು ಎಂದು ಅವರು ಬರೆದಿದ್ದಾರೆ.
ಈ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಬಳಕೆದಾರರು ಕೂಡ ರೆಸ್ಟೋರೆಂಟ್ ಸಿಬ್ಬಂದಿಯ ದಯೆಯನ್ನು ಮೆಚ್ಚಿಕೊಂಡಿದ್ದಾರೆ.