ಒಡಹುಟ್ಟಿದವರನ್ನು ಅದೇ ದಿನ ಭ್ರೂಣದಿಂದ ಐವಿಎಫ್ ಮೂಲಕ ಗರ್ಭ ಧರಿಸಲಾಯಿತು. ಕೇವಲ ವಿಲ್ ಅನ್ನು ಮಾತ್ರ ಅಳವಡಿಸಲಾಯಿತು ಹಾಗೂ ಸಾರಾಳನ್ನು ಫ್ರೀಜರ್ ನಲ್ಲಿ 18 ತಿಂಗಳು ಇರಿಸಲಾಗಿತ್ತು.
“ನನ್ನ ಹೆತ್ತವರು ಐವಿಎಫ್ ಬಳಸಿ ಮಕ್ಕಳನ್ನು ಹೊಂದಿದ್ದರು. ಪ್ರತಿ ಐವಿಎಫ್ ಚಕ್ರದಲ್ಲಿ ಅಮ್ಮ ಸಾಕಷ್ಟು ಅಂಡಾಣುಗಳನ್ನು ಉತ್ಪಾದಿಸಿದ್ದರು. ಕ್ಲಿನಿಕ್ ಎಲ್ಲಾ ಅಂಡಾಣುಗಳನ್ನು ಫಲವತ್ತಾಗಿಸಲು ಪ್ರಯತ್ನಿಸಿತ್ತು. ಈ ಭ್ರೂಣಗಳಲ್ಲಿ ಒಂದು ಪೂರ್ಣ ಅವಧಿಗೆ ಹೋಯಿತು ಮತ್ತು ಆಗ ನನ್ನ ಸಹೋದರ ಜನಿಸಿದ. ಇತರ ಭ್ರೂಣಗಳನ್ನು ಫ್ರೀಜ್ ಮಾಡಲಾಯ್ತು. ಇದರಿಂದ ಭವಿಷ್ಯದಲ್ಲಿ ಅವುಗಳನ್ನು ಅಳವಡಿಸಲು ಲಭ್ಯವಿರುತ್ತದೆ. ನಾನು ಈ ಭ್ರೂಣಗಳಲ್ಲಿ ಒಂದಾಗಿದ್ದೆ. ಜನವರಿ 2001 ರಲ್ಲಿ ನನ್ನ ಅವಳಿ ಸಹೋದರ ವಿಲ್ ಜನಿಸಿದ 12 ತಿಂಗಳ ನಂತರ ನನ್ನನ್ನು ಅಳವಡಿಸಲಾಯಿತು” ಎಂದು ಸಾರಾ ವಿವರಿಸಿದ್ದಾರೆ.
ತಮ್ಮ ಭ್ರೂಣಗಳನ್ನು ನೈಸರ್ಗಿಕವಾಗಿ ಫಲವತ್ತಾಗಿಸಿದಿದ್ದರೆ, ಅವಳು ಮತ್ತು ವಿಲ್ ಒಂದೇ ಸಮಯದಲ್ಲಿ ಅವಳಿಗಳಾಗಿ ಜನಿಸುತ್ತಿದ್ದರು ಎಂದು ಸಾರಾ ಹೇಳಿದ್ದಾರೆ. ಕುತೂಹಲಕಾರಿಯಾಗಿ, ಎರಡು ವರ್ಷಗಳ ಹಿಂದೆ ಇಬ್ಬರಿಗೂ ಜೈವಿಕ ಅವಳಿಗಳ ಬಗ್ಗೆ ಯಾವುದೇ ಕಲ್ಪನೆ ಇರಲಿಲ್ಲ. ಪೋಷಕರು ಸತ್ಯಾಂಶ ತಿಳಿಸಿದಾಗ ಇಬ್ಬರಿಗೂ ನಿಜಾಂಶ ತಿಳಿಯಿತು.
ಸಾರಾ ಈ ಮಾಹಿತಿಯನ್ನು ಟಿಕ್ಟಾಕ್ನಲ್ಲಿ ಹಂಚಿಕೊಂಡ ನಂತರ ಒಡಹುಟ್ಟಿದವರ ನಂಬಲಾಗದ ಕಥೆ ಎಲ್ಲರಲ್ಲೂ ಆಶ್ಚರ್ಯ ತಂದಿದೆ. ಅಲ್ಲದೆ ಈಕೆಯ ವಿಡಿಯೋ ವೈರಲ್ ಆಗಿದ್ದು, ಲಕ್ಷಾಂತರ ಮಂದಿ ವೀಕ್ಷಿಸಿದ್ದಾರೆ.