
ಹಿಂದಿ ಭಾಷೆಯ ‘ಶೋಸ್ಟಾಪರ್(Shwostopper)’ ವೆಬ್ ಸೀರೀಸ್‌ನಲ್ಲಿ ಕಾಣಿಸಿಕೊಳ್ಳಲಿರುವ ಶ್ವೇತಾ ತಿವಾರಿ ಪತ್ರಿಕಾಗೋಷ್ಠಿಯೊಂದರಲ್ಲಿ ವಿವಾದಾತ್ಮಕ ಹೇಳಿಕೆ ನೀಡಿ ಸಮಸ್ಯೆಗೆ ಸಿಲುಕಿದ್ದಾರೆ. ಮಧ್ಯಪ್ರದೇಶದ ಭೋಪಾಲ್ ನಲ್ಲಿ ನಡೆದ ಈ ಪತ್ರಿಕಾಗೋಷ್ಠಿಯಲ್ಲಿ ಅವರ ಸಹ-ನಟರಾದ ರೋಹಿತ್ ರಾಯ್, ಸೌರಭ್ ರಾಜ್ ಜೈನ್ ಮತ್ತು ದಿಗಂಗನಾ ಸೂರ್ಯವಂಶಿ ಅವರು ಉಪಸ್ಥಿತರಿದ್ದರು.
ಮಹಾಭಾರತದ ಧಾರಾವಾಹಿಯಲ್ಲಿ ಶ್ರೀಕೃಷ್ಣನ ಪಾತ್ರ ನಿರ್ವಹಿಸಿದ್ದ ಸೌರಭ್ ಜೈನ್ ಅವರು ಮುಂಬರುವ ಈ ವೆಬ್ ಸರಣಿಯಲ್ಲಿ ಬ್ರಾ ಫಿಟ್ಟರ್ ಪಾತ್ರ ನಿರ್ವಹಿಸಲಿದ್ದಾರೆ. ಈ ಬಗ್ಗೆ ಹಲವಾರು ಕಾರ್ಯಕ್ರಮಗಳಲ್ಲಿ ಅಪಹಾಸ್ಯ ಮಾಡಲಾಗುತ್ತಿದೆ. ಇದೆ ವಿಚಾರವಾಗಿ ತಮಾಷೆಯಾಗಿ ಮಾತನಾಡಿದ ಶ್ವೇತಾ, “ಭಗವಾನ್ ಸೇ ಸೀದಾ ಬ್ರಾ ಫಿಟ್ಟರ್. ಮತ್ಲಬ್ ಜಂಪ್ ತೋ ದೇಖೋ. ಮೇರಿ ಬ್ರಾ ಕಾ ಸೈಜ್ ‘ಭಗವಾನ್’ ಲೇ ರಹೇ ಹೈ. (ದೇವರಿಂದ ನೇರವಾಗಿ ಬ್ರಾ ಫಿಟ್ಟರ್‌ಗೆ, ಅವರ ಪಾತ್ರ ಬದಲಾವಣೆ ನೋಡಿ, ಅಂದ್ರೆ (ವೆಬ್ ಸರಣಿಯಲ್ಲಿ) ನನ್ನ ಬ್ರಾ ಗಾತ್ರವನ್ನು ದೇವರು ತೆಗೆದುಕೊಳ್ಳುತ್ತಾನೆ) ಎಂದಿದ್ದಾರೆ. ಶ್ವೇತಾ ಅವರ ಈ ಜೋಕ್ ಗೆ ಅಲ್ಲಿದ್ದವರೆಲ್ಲ ನಕ್ಕರು, ಆದರೆ ಈ ವಿಷಯ ಈಗ ಗಂಭೀರ ರೂಪ ಪಡೆದುಕೊಂಡಿದೆ.
ಶ್ವೇತಾ ಅವರ ಹೇಳಿಕೆಯು ವೈರಲ್ ಆಗಿದ್ದು, ಹಲವರು ಈ ಹೇಳಿಕೆಯನ್ನ ಖಂಡಿಸಿದ್ದಾರೆ. ಮಧ್ಯಪ್ರದೇಶದ ಗೃಹ ಸಚಿವ ನರೋತ್ತಮ್ ಮಿಶ್ರಾ ಅವರು ಈ ಬಗ್ಗೆ 24 ಗಂಟೆಗಳ ಒಳಗೆ ವರದಿ ಸಲ್ಲಿಸುವಂತೆ ಭೋಪಾಲ್‌ನ ಪೊಲೀಸ್ ಕಮಿಷನರ್‌ಗೆ ಸೂಚಿಸಿದ್ದೇನೆ. ಅದರ ಆಧಾರದ ಮೇಲೆ ನಟಿಯ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಟ್ವೀಟ್ ಮಾಡಿದ್ದಾರೆ.
ಹಿಂದಿ ಸ್ಮಾಲ್ ಸ್ಕ್ರೀನ್ ನಲ್ಲಿ ಎರಡು ದಶಕಗಳಿಂದ ಆ್ಯಕ್ಟೀವ್ ಆಗಿರುವ ಶ್ವೇತಾ ತಿವಾರಿ, ಕಸೌಟಿ ಜಿಂದಗಿ ಕೇ, ಬಿಗ್ ಬಾಸ್, ಮೇರೆ ಡ್ಯಾಡ್ ಕೆ ದುಲ್ಹನ್, ಬೆಗುಸರಾಯ್ ಸೇರಿದಂತೆ ಹಲವು ರಿಯಾಲಿಟಿ ಶೋ ಹಾಗೂ ಧಾರಾವಾಹಿಗಳಲ್ಲಿ ನಟಿಸಿ ಜನಪ್ರಿಯರಾಗಿದ್ದಾರೆ.