ಚಿಕ್ಕಮಗಳೂರು: ಶೃಂಗೇರಿ ಮಠದ ವತಿಯಿಂದ ನಿರ್ಮಾಣವಾಗುತ್ತಿರುವ ಮಠದ ಬಳಿಯ ಗುಡ್ಡದ ಮೇಲೆ ಬೃಹತ್ ಶಂಕರಾಚಾರ್ಯ ಮೂರ್ತಿ ನಿರ್ಮಾಣ ಕಾಮಗಾರಿಗಾಗಿ ಅರಣ್ಯ ನಾಶಪಡಿಸಿರುವ ಆರೋಪದಲ್ಲಿ ಶೃಂಗೇರಿ ಮಠದ ಗುತ್ತಿಗೆದಾರನ ವಿರುದ್ಧ ಎಫ್ ಐ ಆರ್ ದಾಖಲಾಗಿದೆ.
ಶೃಂಗೇರಿ ಮಠದ ಬಳಿ ಗುಡ್ಡದ ಮೇಲೆ ಬೃಹತ್ ಶಂಕರಾಚಾರ್ಯರ ಪ್ರತಿಮೆ ನಿರ್ಮಿಸಲಾಗಿದೆ. ಪ್ರತಿಮೆ ಬಳಿ ಕಟ್ಟಡ ನಿರ್ಮಾಣ ಕಾಮಗಾರಿ ನಡೆಯುತ್ತಿದೆ. ಕಾಮಗಾರಿಗೆ ಗುತ್ತಿಗೆ ಪಡೆದಿರುವ ಸಂದೀಪ್ ಎಂಬುವವರು ಬೆಟ್ಟಗುಡ್ಡ ನಾಶ, ಮರಗಳನ್ನು ಕಡಿದಿರುವ ಕಾರಣಕ್ಕೆ ಸಂದೀಪ್ ವಿರುದ್ಧ ಪ್ರಕರಣ ದಾಖಲಾಗಿದೆ. ಶೃಂಗೇರಿ ವಲಯ ಅರಣ್ಯ ಇಲಾಖೆಯ ಕಚೇರಿಯಲ್ಲಿ ಎಫ್ ಐ ಆರ್ ದಾಖಲಾಗಿದೆ.
ಶಂಕರಾಚಾರ್ಯರ ಮೂರ್ತಿ ಬಳಿ ಕಟ್ಟಡ ಕಾಮಗಾರಿ ನಡೆಯುತ್ತಿದ್ದು, ಕೆಳಭಾಗದಲ್ಲಿ ಮಣ್ಣು ಕುಸಿತ ಹಿನ್ನೆಲೆಯಲ್ಲಿ ಮರಗಳನ್ನು ಕಡಿದು ಕಾಂಪೌಂಡ್ ಗೋಡೆ ನಿರ್ಮಾಣ ಮಾಡಲಾಗಿದೆ. ಶೃಂಗೇರಿ ಬಳಿಯ ಮಾರುತಿ ಬೆಟ್ಟದಲ್ಲಿ ಗುಡ್ಡದ ಮೇಲೆ ಜೆಸಿಬಿ ಬಳಸಿ ಕಾಮಗಾರಿ ನಡೆಸಿದ ಕಾರಣ ರಸ್ತೆಗಳ ಮೇಲೆ ಗುಡ್ಡ, ಮಣ್ಣು ಕುಸಿದು ಬೀಳುತ್ತಿವೆ. ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಗುತ್ತಿಗೆದಾರ ಸಂದೀಪ್ ವಿರುದ್ಧ ಪ್ರಕರಣ ದಾಖಲಾಗಿದೆ.