ದ್ವಾದಶ ಜ್ಯೋತಿರ್ಲಿಂಗ ತಾಣ ಶ್ರೀಶೈಲಂ ದೇವಸ್ಥಾನದ ಪ್ರಸಾದದಲ್ಲಿ ಮೂಳೆ ಪೀಸ್ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಡೆದ ತನಿಖೆಯಲ್ಲಿ ಪ್ರಸಾದದಲ್ಲಿ ಸಿಕ್ಕಿದ್ದು ಮೂಳೆ ಅಲ್ಲ ಎಂಬುದು ದೃಢಪಟ್ಟಿದೆ.
ಶ್ರೀಶೈಲ ದೇಗುಲದಲ್ಲಿ ಪ್ರಸಾದ ತಯಾರಿಕೆಯಲ್ಲಿ ಯಾವಾಗಲೂ ಪ್ರಮಾಣಿತ ನಿರ್ವಹಣಾ ಕ್ರಮಗಳನ್ನು ಅನುಸರಿಸುವುದರಿಂದ ಇಂತಹ ಅಪವಿತ್ರ ಕೃತ್ಯಗಳಿಗೆ ಅವಕಾಶವಿಲ್ಲ ಎಂದು ದೇವಸ್ಥಾದ ಇ.ಒ ಸ್ಪಷ್ಟಪಡಿಸಿದ್ದಾರೆ.
ಶ್ರೀಶೈಲ ದೇವಸ್ಥಾನಕ್ಕೆ ಭೇಟಿ ನೀಡಿದ್ದ ಹೈದರಾಬಾದ್ ಮೂಲದ ಭಕ್ತರೊಬ್ಬರು ದೇವಸ್ಥಾನದಲ್ಲಿ ನೀಡಲಾಗಿದ್ದ ಪುಳಿಯೊಗರೆ ಪ್ರಸಾದದಲ್ಲಿ ಎರಡು ಅಸ್ಥಿ ಪೀಸ್ ಗಳು ಸಿಕ್ಕಿವೆ ಎಂದು ಹೈದರಾಬಾದ್ ಮೂಲದ ಭಕ್ತರೊಬ್ಬರು ಆರೋಪಿಸಿದ್ದರು. ಈ ಬಗ್ಗೆ ಶ್ರೀಶೈಲ ದೇವಸ್ಥಾನದ ಆಡಳಿತ ಮಂಡಳಿ ತನಿಖೆಗೆ ತ್ರಿಸದಸ್ಯ ಸಮಿತಿ ರಚಿಸಿತ್ತು. ಇದೀಗ ಸಮಿತಿ ಪ್ರಸಾದದಲ್ಲಿ ಸಿಕ್ಕಿದ್ದು ಮೂಳೆಯಲ್ಲ ದಾಲ್ಚಿನ್ನಿ ತುಂಡುಗಳು. ಅದನ್ನು ತಪ್ಪಾಗಿ ಭಾವಿಸಿ ಭಕ್ತರೊಬ್ಬರು ಆರೋಪಿಸಿದ್ದಾಗಿ ಸ್ಪಷ್ಟಪಡಿಸಿದೆ.
ಪುಳಿಯೊಗರೆ ಪ್ರಸಾದದಲ್ಲಿ ಬಳಸುವ ದಾಲ್ಚಿನ್ನಿ ಕಡ್ಡಿಗಳನ್ನು ಭಕ್ತರೊಬ್ಬರು ನೋಡಿ ಮೂಳೆ ಎಂದು ಭಾವಿಸಿದ್ದಾರೆ ಎಂದು ದೇವಸ್ಥಾನ ಸಮಿತಿ ನಡೆಸಿದ ತನಿಖೆಯಿಂದ ತಿಳಿದುಬಂದಿದೆ ಎಂದು ಆಡಳಿತ ಮಂಡಳಿ ತಿಳಿಸಿದೆ.