![](https://kannadadunia.com/wp-content/uploads/2021/07/sriramulu-20191551835335.jpg)
ವಿಜಯನಗರ: ಬಿಜೆಪಿ ಹೈಕಮಾಂಡ್ ಬುಲಾವ್ ಹಿನ್ನೆಲೆಯಲ್ಲಿ ದೆಹಲಿಗೆ ತೆರಳಲು ಸಿದ್ಧತೆ ನಡೆಸಿರುವ ಮಾಜಿ ಸಚಿವ ಶ್ರೀರಾಮುಲು, ಬಿ.ಎಸ್.ಯಡಿಯೂರಪ್ಪ ನವರೇ ನಮ್ಮ ಹೈಕಮಾಂಡ್ ಎಂದಿದ್ದಾರೆ.
ವಿಜಯನಗರ ಜಿಲ್ಲೆಯ ನಂದಿಪುರದಲ್ಲಿ ಸುದ್ದಿಗೋಷ್ಠಿ ನಡೆಸಿದ ಶ್ರೀರಾಮುಲು, ಯಡಿಯೂರಪ್ಪ ಅವರೇ ನಮ್ಮ ಹೈಕಮಾಂಡ್. ಅವರು ತೆಗೆದುಕೊಳ್ಳುವ ನಿರ್ಧಾರವೇ ಅಂತಿಮ ಅದಕ್ಕೆ ನಾವು ಬದ್ಧ ಎಂದರು.
ರಾಜ್ಯಾಧ್ಯಕ್ಷರನ್ನು ಬದಲಿಸುವುದಾದರೆ ನನಗೆ ಅವಕಾಶ ಕೊಡಿ ಎಂದು ಹೈಕಮಾಂಡ್ ಬಳಿ ವಿನಂತಿಸಿಕೊಂಡಿದ್ದೇನೆ. ಅಂತಿಮವಾಗಿ ಪಕ್ಷ ಕೈಗೊಳ್ಳುವ ತೀರ್ಮಾನಕ್ಕೆ ಬದ್ಧ ಎಂದರು.
ಅಸಮಾಧಾನಿತರೆಲ್ಲರೂ ದೆಹಲಿಯಲ್ಲಿ ವರಿಷ್ಠರ ಜೊತೆ ಮಾತುಕತೆ ನಡೆಸಿದ್ದಾರೆ. ಹೀಗಾಗಿ ಎಲ್ಲವೂ ಬಗೆಹರಿಯುವ ವಿಶ್ವಾಸವಿದೆ ಎಂದು ತಿಳಿಸಿದರು.
ಇದೇ ವೇಳೆ ಶಾಸಕ ಜನಾರ್ಧನ ರೆಡ್ಡಿ ವಿಚಾರವಾಗಿ ಮಾತನಾಡಿದ ಶ್ರೀರಾಮುಲು, ಜನಾರ್ಧನ ರೆಡ್ಡಿ ಜೊತೆ ಮತ್ತೆ ಒಂದಾಗಲು ಸಾಧ್ಯವಿಲ್ಲ. ಬೇರೆ ವಿಷಯವಾಗಿದ್ದರೆ ಸಂಧಾನವಾಗಬಹುದಿತ್ತೇನೋ. ಆದರೆ ಇದು ಬೇರೆಯೇ ಇದೆ ಎಂದು ಹೇಳಿದರು.