![](https://kannadadunia.com/wp-content/uploads/2024/01/2e47aca6-341b-4273-82d5-920c0efd326c-1024x569.jpg)
ಯಂಗ್ ದೇವರಾಜ್ ಎಂದೇ ಕರೆಸಿಕೊಳ್ಳುವ ದೇವರಾಜ್ ಪುತ್ರ ಪ್ರಣಂ ದೇವರಾಜ್ ನಾಯಕನಾಗಿ ಅಭಿನಯಿಸಿರುವ ವೈರಂ ಚಿತ್ರದ ಶ್ರೀ ರಾಮ್ ಹಾಡು ಇಂದು ಯೂಟ್ಯೂಬ್ ನಲ್ಲಿ ಬಿಡುಗಡೆ ಮಾಡಲಾಗಿದೆ. ಅನುರಾಗ ಕುಲಕರ್ಣಿ ಈ ಹಾಡಿಗೆ ಧ್ವನಿಯಾಗಿದ್ದು, ಮಹತಿ ಸ್ವರ ಸಾಗರ್ ಸಂಗೀತ ಸಂಯೋಜನೆ ನೀಡಿದ್ದಾರೆ. ವಿ ನಾಗೇಂದ್ರ ಪ್ರಸಾದ್ ಸಾಹಿತ್ಯ ಬರೆದಿದ್ದಾರೆ.
ಸಾಯಿ ಶಿವನ್ ನಿರ್ದೇಶಿಸಿರುವ ಈ ಚಿತ್ರದಲ್ಲಿ ಪ್ರಣಾಮ್ ದೇವರಾಜ್ ಮತ್ತು ಮೊನಾಲ್ ನಾಯಕ, ನಾಯಕಿಯಾಗಿದ್ದು, ಚಮಕ್ ಚಂದ್ರ, ಗುರುದರಂ, ಬದ್ರಂ, ಶಂಕರ್ ಆಶ್ವತ್, ಮತ್ತು ವೀಣಾ ಸುಂದರ್ ಉಳಿದ ಪಾತ್ರ ವರ್ಗದಲ್ಲಿದ್ದಾರೆ.
ಶ್ರೀನಿಧಿ ಕ್ರಿಯೇಶನ್ ಬ್ಯಾನರ್ ನಲ್ಲಿ ವಿಮಾರೆಡ್ಡಿ ನಿರ್ಮಾಣ ಮಾಡಿದ್ದಾರೆ. ವಿಜಯ ಕುಮಾರ್ ಸಂಕಲನ ಮತ್ತು ಸಮಲ ಭಾಸ್ಕರ್ ಛಾಯಾಗ್ರಹಣವಿದೆ.