ಹಿಂದೂ ಧರ್ಮದಲ್ಲಿ ಭಗವಂತ ಕೃಷ್ಣನ ಜನ್ಮದಿನವನ್ನು ಅದ್ಧೂರಿಯಿಂದ ಆಚರಿಸಲಾಗುತ್ತದೆ. ದೇಶದಲ್ಲಿ ಮಾತ್ರವಲ್ಲದೆ ವಿದೇಶದಲ್ಲಿರುವ ಭಕ್ತರು ಕೂಡ ಶ್ರದ್ಧೆಯಿಂದ ಕೃಷ್ಣ ಜನ್ಮಾಷ್ಟಮಿಯನ್ನು ಆಚರಿಸುತ್ತಾರೆ. ಈ ಬಾರಿ ಆಗಸ್ಟ್ 30ರಂದು ಕೃಷ್ಣ ಜನ್ಮಾಷ್ಟಮಿ ಆಚರಿಸಲಾಗ್ತಿದೆ.
ಕೃಷ್ಣ ಜನ್ಮಾಷ್ಟಮಿಯಂದು ವೃತ ಮಾಡಿ, ಜಾಗರಣೆ ಮಾಡಿ, ಕೃಷ್ಣನ ಆರಾಧನೆ ಮಾಡಲಾಗುತ್ತದೆ. ರಾಶಿಗನುಸಾರವಾಗಿ ಕೃಷ್ಣನಿಗೆ ಸಿಹಿ ತಿಂಡಿಗಳನ್ನು ಅರ್ಪಿಸಿದ್ರೆ, ಗೋಪಿಲೋಲ ಬೇಗ ಭಕ್ತರಿಗೆ ಒಲಿಯುತ್ತಾನೆಂದು ನಂಬಲಾಗಿದೆ.
ಮೇಷ : ಜನ್ಮಾಷ್ಟಮಿಯ ದಿನ ಸಕ್ಕರೆ ಕ್ಯಾಂಡಿಯನ್ನು ಈ ರಾಶಿಯವರು ಅರ್ಪಿಸಬೇಕು. ಶ್ರೀಕೃಷ್ಣನ ಆಶೀರ್ವಾದ ಭಕ್ತರಿಗೆ ಸಿಗುತ್ತದೆ. ಎಲ್ಲ ಆಸೆ ಈಡೇರುತ್ತದೆ.
ವೃಷಭ ರಾಶಿ : ಈ ರಾಶಿಯವರು, ಕೃಷ್ಣ ಜನ್ಮಾಷ್ಟಮಿಯಂದು ಭಗವಂತನಿಗೆ ಬೆಣ್ಣೆಯನ್ನು ಅರ್ಪಿಸಬೇಕು. ಇದ್ರಿಂದ ಆರೋಗ್ಯ ಸಂಬಂಧಿ ಸಮಸ್ಯೆ ಕಡಿಮೆಯಾಗುತ್ತದೆ.
ಮಿಥುನ : ಈ ರಾಶಿಯವರು ಹಸುವಿನ ಹಾಲಿನಿಂದ ತಯಾರಿಸಿದ ಸಿಹಿ ಅಥವಾ ಶುದ್ಧ ತುಪ್ಪವನ್ನು ಅರ್ಪಿಸಬೇಕು. ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿ ನೆಲೆಸುತ್ತದೆ. ಕೆಲಸಕ್ಕೆ ಸಂಬಂಧಿಸಿದ ಎಲ್ಲ ಸಮಸ್ಯೆ ಕಡಿಮೆಯಾಗುತ್ತದೆ.
ಕರ್ಕಾಟಕ : ಈ ರಾಶಿಯವರು ಕೃಷ್ಣನಿಗೆ ಹಾಲು ಮತ್ತು ಕುಂಕುಮವನ್ನು ಅರ್ಪಿಸಬೇಕು. ಮಗುವಿನ ಸಂತೋಷದ ಜೊತೆ ಎಲ್ಲ ಕೆಲಸ ಯಶಸ್ವಿಯಾಗಿ ಈಡೇರುತ್ತದೆ.
ಸಿಂಹ : ಸಿಂಹ ರಾಶಿ ಜನರು, ಜನ್ಮಾಷ್ಟಮಿಯಂದು ಬಾಲ ಕೃಷ್ಣನಿಗೆ ಬೆಣ್ಣೆ ನೀಡಬೇಕು. ಖ್ಯಾತಿಯನ್ನು ಹೆಚ್ಚಿಸುತ್ತದೆ. ಬಡ್ತಿ ಸಿಗಲು ಕಾರಣವಾಗುತ್ತದೆ.
ಕನ್ಯಾ : ಈ ರಾಶಿಯವರು, ಖೋವಾ ನೀಡಬೇಕು. ಇದು ಶುಭಕರವಾಗಿದ್ದು, ಜೀವನದಲ್ಲಿ ಸಕಾರಾತ್ಮಕತೆ ಹೆಚ್ಚಾಗುತ್ತದೆ.
ತುಲಾ : ಈ ರಾಶಿಯವರು, ಶುದ್ಧ ಹಸುವಿನ ತುಪ್ಪವನ್ನು ನೀಡಬೇಕು. ಎಲ್ಲಾ ರೋಗ ಕಡಿಮೆಯಾಗುತ್ತದೆ. ಜೀವನದಲ್ಲಿ ಸಂತೋಷ ನೆಲೆಸುತ್ತದೆ.
ವೃಶ್ಚಿಕ : ಈ ರಾಶಿಯವರು ಹಾಲಿನಿಂದ ಮಾಡಿದ ಸಿಹಿತಿಂಡಿಗಳನ್ನು ಮಾತ್ರ ಅರ್ಪಿಸಬೇಕು. ಇದ್ರಿಂದ ಜೀವನದಲ್ಲಿರುವ ಆರ್ಥಿಕ ಸಮಸ್ಯೆಗೆ ಮುಕ್ತಿ ಸಿಗುತ್ತದೆ.
ಧನು : ಈ ರಾಶಿಯವರು, ಹಣ್ಣುಗಳು ಮತ್ತು ಪಂಚಾಮೃತವನ್ನು ಅರ್ಪಿಸಬೇಕು. ಜೀವನದಲ್ಲಿ ಅಪಾರ ಸಂತೋಷ ಲಭಿಸುತ್ತದೆ.
ಮಕರ : ಈ ರಾಶಿಯವರು ಬೆಣ್ಣೆ-ಸಕ್ಕರೆಯನ್ನು ಅರ್ಪಿಸಬೇಕು. ಜೀವನದಲ್ಲಿ ಸಂತೋಷ ಮತ್ತು ಸಮೃದ್ಧಿ ಲಭಿಸುತ್ತದೆ. ನ್ಯಾಯಾಲಯದ ಪ್ರಕರಣದಲ್ಲಿ ಯಶಸ್ಸು ಸಿಗುತ್ತದೆ.
ಕುಂಭ : ಈ ರಾಶಿಯವರು, ಬಾಲುಷಾಹಿ ನೀಡಬೇಕು. ಹಣಕಾಸಿನ ಸಮಸ್ಯೆ ಕಡಿಮೆಯಾಗಿ, ಕುಟುಂಬದ ಬೆಂಬಲ ಸಿಗುತ್ತದೆ.
ಮೀನ : ಈ ರಾಶಿಯವರು, ಜನ್ಮಾಷ್ಟಮಿಯಂದು ಕೃಷ್ಣನಿಗೆ ಕೇಸರಿ ಹಾಲು ಮತ್ತು ಬಿಳಿ ಸಿಹಿತಿಂಡಿಗಳನ್ನು ನೀಡಬೇಕು. ಪ್ರೇಮ ಸಂಬಂಧದಲ್ಲಿ ಯಶಸ್ಸು ಸಿಗುತ್ತದೆ. ಸಾಲದಿಂದ ಮುಕ್ತಿ ಸಿಗುತ್ತದೆ.