
ಅದೇ ರೀತಿ ಖ್ಯಾತ ಗಾಯಕಿ ಶ್ರೇಯಾ ಘೋಷಾಲ್ ಕೂಡ ಟ್ವಿಟರ್ ನೂತನ ಸಿಇಓ ಪರಾಗ್ ಅಗರ್ವಾಲ್ಗೆ ಟ್ವಿಟರ್ನಲ್ಲಿ ಶುಭ ಹಾರೈಸಿದ್ದಾರೆ. ಅಭಿನಂದನೆಗಳು..! ಪರಾಗ್, ನಿಮ್ಮ ಬಗ್ಗೆ ನಾನು ಹೆಮ್ಮೆ ಪಡುತ್ತಿದ್ದೇನೆ. ಇದು ನಮ್ಮ ಪಾಲಿಗೆ ಅತ್ಯಂತ ಶುಭದಿನವಾಗಿದೆ. ಈ ಸುದ್ದಿಯನ್ನು ನಾವು ಸಂಭ್ರಮಿಸುತ್ತಿದ್ದೇವೆ ಎಂದು ಬರೆದುಕೊಂಡಿದ್ದಾರೆ.
ಅಂದಹಾಗೆ ಶ್ರೇಯಾ ಘೋಷಾಲ್ ಹಾಗೂ ಪರಾಗ್ ಅಗರ್ವಾಲ್ ಆತ್ಮೀಯ ಸ್ನೇಹಿತರು. ಈ ಹಿಂದೆ ಶ್ರೇಯಾ ಘೋಷಾಲ್ ಹಾಗೂ ಪರಾಗ್ ಅಗರ್ವಾಲ್ ಒಟ್ಟಾಗಿ ಕ್ಲಿಕ್ಕಿಸಿಕೊಂಡ ಫೋಟೋಗಳು ಇದೀಗ ವೈರಲ್ ಆಗ್ತಿವೆ. ಹಿಂದಿನ ಟ್ವೀಟ್ ಒಂದರಲ್ಲಿ ಶ್ರೇಯಾ, ಪರಾಗ್ಗೆ ಜನ್ಮ ದಿನದ ಶುಭಾಶಯವನ್ನು ಕೋರಿದ್ದಾರೆ. ಈ ಟ್ವೀಟ್ನಲ್ಲಿ ಶ್ರೇಯಾ ಪರಾಗ್ರನ್ನು ತಮ್ಮ ಬಾಲ್ಯ ದಿನದ ಸ್ನೇಹಿತ ಎಂದು ಕರೆದಿದ್ದಾರೆ.

