
ಹಾಸನ: ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಪಂಚಭೂತಗಳಲ್ಲಿ ಲೀನರಾಗಿದ್ದಾರೆ. ಚಾರುಕೀರ್ತಿ ಶ್ರೀಗಳ ಚಿತೆಗೆ ಜೈನ ಮಠದ ಭಟ್ಟಾರಕರು ಅಗ್ನಿಸ್ಪರ್ಶ ಮಾಡಿದ್ದಾರೆ.
ಹಾಸನ ಜಿಲ್ಲೆ ಶ್ರವಣಬೆಳಗೊಳದಲ್ಲಿರುವ ಜೈನಮಠದ ಚಂದ್ರಗಿರಿ ತಪ್ಪಲಿನಲ್ಲಿ ಸೂರ್ಯಾಸ್ತಕ್ಕೂ ಮೊದಲು ಚಾರುಕೀರ್ತಿ ಸ್ವಾಮೀಜಿ ಚಿತೆಗೆ ಅಗ್ನಿಸ್ಪರ್ಶ ಮಾಡಲಾಗಿದೆ. ಜೈನ ಸಂಪ್ರದಾಯದಂತೆ ಸಕಲ ಸರ್ಕಾರಿ ಗೌರವಗಳೊಂದಿಗೆ ಸ್ವಾಮೀಜಿ ಅಂತ್ಯಕ್ರಿಯೆ ನೆರವೇರಿದೆ. ಸ್ವಾಮೀಜಿ 53 ವರ್ಷಗಳ ಕಾಲ ಜೈನಮಠದ ಪೀಠಾಧಿಪತಿಯಾಗಿದ್ದರು.