ನಾಳೆಯಿಂದ ಶ್ರಾವಣ ಮಾಸ ಆರಂಭವಾಗಲಿದ್ದು, ಶ್ರಾವಣ ಮಾಸ ಶಿವನಿಗೆ ಬಹಳ ಪ್ರಿಯವಾಗಿದೆ. ಅದಕ್ಕಾಗಿಯೇ ಶ್ರಾವಣ ಮಾಸದಲ್ಲಿ ಶಿವ ಮತ್ತು ಪಾರ್ವತಿ ದೇವಿಯ ಆರಾಧನೆಗೆ ವಿಶೇಷ ಮಹತ್ವವಿದೆ.
ಶ್ರಾವಣ ಮಾಸದಲ್ಲಿ ಕೆಲವು ವಿಚಾರ ನಿಷಿದ್ಧವೆಂದು ಪರಿಗಣಿಸಲಾದ ಅಂತಹ ವಿಷಯಗಳು ಯಾವುವು ಎಂದು ತಿಳಿಯೋಣ.
*ಯಾವುದೇ ತುಂಡಾದ ವಿಗ್ರಹವನ್ನು ಮನೆಯಲ್ಲಿ ಇಡುವುದು ಒಳ್ಳೆಯದಲ್ಲ, ಆದ್ದರಿಂದ ಶ್ರಾವಣ ಪ್ರಾರಂಭವಾಗುವ ಮೊದಲು, ನೀವು ಮುರಿದ ಅಥವಾ ತುಂಡಾದ ವಿಗ್ರಹಗಳನ್ನು ನದಿಯಲ್ಲಿ ಬಿಡಿ.
*ಶ್ರಾವಣ ಮಾಸದಲ್ಲಿ ನೀವು ನೆಲದ ಮೇಲೆ ಮಲಗಿದರೆ ಮಾಸದಲ್ಲಿ ನೀವು ಶಿವನ ಆಶೀರ್ವಾದವನ್ನು ಪಡೆದುಕೊಳ್ಳಬಹುದಂತೆ.
*ನಿಮ್ಮ ಮನೆಯಲ್ಲಿ ಆಲ್ಕೋಹಾಲ್ ಮತ್ತು ಸಿಗರೇಟ್ ನಂತಹ ವಸ್ತುಗಳನ್ನು ಸಂಗ್ರಹಿಸಿಡಬೇಡಿ
*ಶ್ರಾವಣ ಮಾಸದಲ್ಲಿ ಈರುಳ್ಳಿ ಮತ್ತು ಬೆಳ್ಳುಳ್ಳಿ ಸೇವನೆಯನ್ನು ಸಹ ನಿಷೇಧಿಸಲಾಗಿದೆ.
*ಶ್ರಾವಣ ಮಾಸದಲ್ಲಿ ನಾನ್ ವೆಜ್ ಸೇವಿಸದಿರುವುದು ಒಳ್ಳೆಯದು
*ಅಧರ್ಮದ ಕೆಲಸ ಮಾಡಬಾರದು ಮತ್ತು ಮಹಿಳೆಯರ ಬಗ್ಗೆ ಯಾವುದೇ ರೀತಿಯ ತಪ್ಪು ಆಲೋಚನೆಗಳನ್ನು ಹೊಂದಿರಬಾರದು.
*ಈ ಪವಿತ್ರ ಶ್ರಾವಣ ಮಾಸದಲ್ಲಿ ನಿಮ್ಮ ಕೋಪವನ್ನು ನಿಮ್ಮಿಂದ ದೂರವಿಡುವುದು ಶಿವನ ಕೃಪೆಗೆ ಕಾರಣವಾಗುತ್ತದೆ.