ಹಿಂದು ಧರ್ಮದಲ್ಲಿ ರಕ್ಷಾ ಬಂಧನಕ್ಕೆ ಮಹತ್ವದ ಸ್ಥಾನವಿದೆ. ಶ್ರಾವಣ ಮಾಸದ ಹುಣ್ಣಿಮೆ ದಿನ ಬರುವ ಈ ರಕ್ಷಾ ಬಂಧನವನ್ನು ಜನರು ಸಂಭ್ರಮದಿಂದ ಆಚರಿಸುತ್ತಾರೆ. ಈ ಬಾರಿ ಆಗಸ್ಟ್ 22ರಂದು ರಕ್ಷಾ ಬಂಧನ ಆಚರಿಸಲಾಗ್ತಿದೆ.
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಶಿವನು ತನ್ನ ಎಲ್ಲಾ ಭಕ್ತರಿಗೆ ಶ್ರಾವಣ ಮಾಸದಲ್ಲಿ ವಿಶೇಷ ಆಶೀರ್ವಾದ ನೀಡುತ್ತಾನೆ. ಮೇಷ, ಮಕರ ಮತ್ತು ಕುಂಭ ರಾಶಿಯವರಿಗೆ ಈ ಭಾರಿ ವಿಶೇಷ ಸಂತೋಷ ಸಿಗಲಿದೆ. ಈ ರಾಶಿಯವರು ರಕ್ಷಾ ಬಂಧನದ ದಿನ ವಿಶೇಷ ಉಪಾಯ ಮಾಡಿ ಶಿವನ ಕೃಪೆಗೆ ಪಾತ್ರರಾಗಬಹುದು.
ಹಿಂದೂ ಧರ್ಮದಲ್ಲಿ ಗಂಗಾಜಲವನ್ನು ಪವಿತ್ರವೆಂದು ಪರಿಗಣಿಸಲಾಗಿದೆ. ಆದ್ದರಿಂದ, ಶಿವನನ್ನು ಮೆಚ್ಚಿಸಲು, ಶಿವಲಿಂಗದ ಮೇಲೆ ಗಂಗಾಜಲವನ್ನು ಅರ್ಪಿಸಬೇಕು. ಶಿವಲಿಂಗದ ಮೇಲೆ ಗಂಗಾಜಲವನ್ನು ಅರ್ಪಿಸುವಾಗ, ರುದ್ರಾಷ್ಟಕಂ ಮತ್ತು ಓಂ ನಮಃ ಶಿವಾಯವನ್ನು ಪಠಿಸಿ.
ಗಂಗಾಜಲದಿಂದ ಶಿವನಿಗೆ ಅಭಿಷೇಕ ಮಾಡಿದ ನಂತರ ದೇಸಿ ತುಪ್ಪದಿಂದ ಆರತಿ ಮಾಡಿ. ಭಕ್ತರಿಗೆ ದೇವರ ವಿಶೇಷ ಆಶೀರ್ವಾದ ಸಿಗಲಿದೆ. ಕುಟುಂಬದ ಎಲ್ಲ ಸಮಸ್ಯೆ ಪರಿಹಾರವಾಗಲಿದೆ.
ಈ ದಿನ ಗಣಪತಿಯನ್ನು ಪೂಜೆ ಮಾಡಿ, ರಾಖಿ ಹಾಕಿದ ನಂತ್ರ ಭೋಲೆನಾಥನಿಗೆ ರಾಖಿ ಕಟ್ಟಿ. ಹೀಗೆ ಮಾಡಿದ್ರೆ ಭಕ್ತರಿಗೆ ಭೋಲೆನಾಥ ಕೃಪೆ ತೋರಿಸುತ್ತಾನೆ.