ನವದೆಹಲಿ: ದೆಹಲಿಯಲ್ಲಿ ಯುವತಿ ಶ್ರದ್ಧಾ ಕೊಲೆ ಆರೋಪಿ ಅಫ್ತಾಬ್ ಮೇಲೆ ರೋಹಿಣಿ ಎಫ್ಎಸ್ಎಲ್ ಕಚೇರಿ ಬಳಿ ಹಲ್ಲೆಗೆ ಯತ್ನಿಸಲಾಗಿದೆ.
ಶ್ರದ್ಧಾ ಕೊಲೆ ಆರೋಪಿ ಅಫ್ತಾಬ್ ಮೇಲೆ ಉದ್ರಿಕ್ತರ ಗುಂಪು ಹಲ್ಲೆ ನಡೆಸಲು ಪ್ರಯತ್ನಿಸಿದೆ. ಅಫ್ತಾಬ್ ನನ್ನು ಎಫ್.ಎಸ್.ಎಲ್. ಕಚೇರಿಯಿಂದ ಕರೆದೊಯ್ಯುತ್ತಿದ್ದಾಗ ಘಟನೆ ನಡೆದಿದೆ. ದೆಹಲಿಯ ರೋಹಿಣಿ ಎಫ್ಎಸ್ಎಲ್ ಕಚೇರಿ ಬಳಿ ಘಟನೆ ನಡೆದಿದ್ದು, ಕೂಡಲೇ ಪೊಲೀಸರು ಅಫ್ತಾಬ್ ನನ್ನು ರಕ್ಷಿಸಿ ಕರೆದುಕೊಂಡು ಹೋಗಿದ್ದಾರೆ.
ಆರೋಪಿ ಅಫ್ತಾಬ್ ನನ್ನು ಎಫ್ಎಸ್ಎಲ್ ನಿಂದ ಕರೆದೊಯ್ಯುವಾಗ ಉದ್ರಿಕ್ತರ ಗುಂಪು ದಾಳಿ ಮಾಡಿದೆ. ವಾಹನದ ಬಾಗಿಲು ತೆರೆಯುವಂತೆ ತಲ್ವಾರ್ ಹಿಡಿದು ದಾಳಿ ಮಾಡಿದ ಉದ್ರಿಕ್ತ ಗುಂಪು ಹೇಳಿದ್ದು, ಆಫ್ತಾಬ್ ತಲೆ ಕತ್ತರಿಸುವುದಾಗಿ ಘೋಷಣೆ ಕೂಗಿದ್ದಾರೆ.