ಯೋಗ ಮಾಡುವಾಗ ನೀರು ಕುಡಿಯಬಾರದು ಎಂದು ಹೇಳಿರುವುದನ್ನು ನೀವು ಕೇಳಿರಬಹುದು. ಆದರೆ ಅದರ ಹಿಂದಿರುವ ವೈಜ್ಞಾನಿಕ ಕಾರಣವೇನು ಗೊತ್ತೇ…?
ಯೋಗ ಮಾಡುವ ಅತ್ಯುತ್ತಮ ಸಮಯ ಎಂದರೆ ಮುಂಜಾನೆ. ಎದ್ದಾಕ್ಷಣ ಖಾಲಿ ಹೊಟ್ಟೆಯಲ್ಲಿ ಯೋಗ ಮಾಡುವುದು ಒಳ್ಳೆಯದು. ಮಧ್ಯದಲ್ಲಿ ನೀರು ಕುಡಿದರೆ ಮನಸ್ಸು ಬೇರೆಡೆಗೆ ತಿರುಗಬಹುದು. ಯೋಗಕ್ಕೆ ಮುಖ್ಯವಾಗಿ ಬೇಕಾದ್ದು ಏಕಾಗ್ರತೆ. ಅದನ್ನು ಸಾಧಿಸಲು ಖಾಲಿ ಹೊಟ್ಟೆಯಲ್ಲಿರಬೇಕು.
ಯೋಗ ಮಾಡುವ ಮುನ್ನ ಹೆಚ್ಚಿನ ನೀರು ಕುಡಿದಿದ್ದರೆ ನೈಸರ್ಗಿಕ ಕರೆ ಮುಗಿಸಲು ಏಳಬೇಕಾದೀತು. ಅಥವಾ ಅದು ಹೊಟ್ಟೆ ತುಂಬಿದ ಭಾವ ನಿಮಗೆ ಕೊಡಬಹುದು. ಇದನ್ನು ತಡೆಗಟ್ಟಿ ಯೋಗಾಸನ ಮಾಡುವುದು ತಪ್ಪು.
ಹೊಟ್ಟೆಯಲ್ಲಿ ತುಂಬಾ ನೀರಿದ್ದರೂ ಕೆಲವು ಆಸನಗಳನ್ನು ಮಾಡಲು ನಿಮಗೆ ಕಷ್ಟವಾಗಬಹುದು. ಹಾಗಾಗಿ ಖಾಲಿ ಹೊಟ್ಟೆಗೆ ಯೋಗಾಭ್ಯಾಸ ಮಾಡಿ.
ಯೋಗ ಮಾಡುವ ಮೊದಲು ಡ್ರೈ ಫ್ರುಟ್ಸ್ ತಿನ್ನುವುದರಿಂದ ದೇಹಕ್ಕೂ ಶಕ್ತಿ ಸಿಗುತ್ತದೆ. ಯೋಗ ಮುಗಿಸಿ ಹತ್ತು ನಿಮಿಷಗಳ ಬಳಿಕ ಬಿಸಿ ಬಿಸಿ ನೀರು ಕುಡಿಯಿರಿ. ಇದರಿಂದ ಮಲಬದ್ಧತೆಯಂತ ಸಮಸ್ಯೆಗಳೂ ನಿವಾರಣೆಯಾಗುತ್ತವೆ.