ನಮ್ಮ ಜೀವನಕ್ಕೆ ಸಂಬಂಧಿಸಿದ ಎಲ್ಲ ವಿಷ್ಯಗಳು ವಾಸ್ತು ಶಾಸ್ತ್ರದಲ್ಲಿ ಇದೆ. ವ್ಯಕ್ತಿ ಯಾವ ವಸ್ತುವನ್ನು ಧರಿಸಬೇಕು, ಯಾವುದನ್ನು ಧರಿಸಬಾರದು ಎಂಬುದನ್ನು ಕೂಡ ಹೇಳಲಾಗಿದೆ. ಅನೇಕರು ದೇವರ ಮೇಲಿನ ಭಕ್ತಿಗೆ ಸದಾ ದೇವರ ಫೋಟೋ ಹಾಗೂ ಲಾಕೆಟನ್ನು ಜೊತೆಗಿಟ್ಟುಕೊಳ್ತಾರೆ. ಕೆಲವರ ಪರ್ಸ್ ನಲ್ಲಿ ದೇವರ ಫೋಟೋ ಇದ್ರೆ ಮತ್ತೆ ಕೆಲವರು ಕೊರಳಿಗೆ ದೇವರ ಲಾಕೆಟ್ ಹಾಕಿಕೊಳ್ತಾರೆ. ವಾಸ್ತು ಶಾಸ್ತ್ರದ ಪ್ರಕಾರ, ದೇವರ ಲಾಕೆಟನ್ನು ಹಾಕಿಕೊಳ್ಳೋದು ಒಳ್ಳೆಯದಲ್ಲ.
ದೇವರು (god) ಪವಿತ್ರವಾದ ಸ್ಥಳದಲ್ಲಿ ಇರಬೇಕು. ದೇವರ ಮನೆಯಲ್ಲಿ ಯಾವುದೇ ಅಶುದ್ಧ ಕೆಲಸ ನಡೆಯಬಾರದು. ದೇವರ ಫೋಟೋ (photo) ಇಟ್ಟುಕೊಳ್ಳೋದಾಗ್ಲಿ ಅಥವಾ ಲಾಕೆಟನ್ನು ಹಾಕಿಕೊಳ್ಳೋದಾಗ್ಲಿ ಮಾಡಿದಾಗ ದೇವರ ಪವಿತ್ರತೆಗೆ ಧಕ್ಕೆಯಾಗುತ್ತದೆ.
ಜನರು ವಾಶ್‌ರೂಮ್ (Washroom)ಗೆ ಹೋಗುವುದರಿಂದ ಹಿಡಿದು ಆಹಾರ ತಿನ್ನುವವರೆಗೆ ಅನೇಕ ಅಶುದ್ಧ ಕೆಲಸಗಳನ್ನು ಮಾಡುತ್ತಾರೆ. ಇಡೀ ದಿನ ಶುದ್ಧವಾಗಿರಲು ಸಾಧ್ಯವಿಲ್ಲ. ಈ ಎಲ್ಲ ಕೆಲಸಗಳನ್ನು ಮಾಡುವುದ್ರಿಂದ ಕೊರಳಲ್ಲಿರುವ ದೇವರು ಅಶುದ್ಧವಾಗುತ್ತಾನೆ. ಕೆಲವೊಮ್ಮೆ ತಿಳಿದೋ ತಿಳಿಯದೆಯೋ ಕೊಳಕು ಕೈ ಲಾಕೆಟ್ ಸ್ಪರ್ಶಿಸಿರುತ್ತದೆ.
ಲಾಕೆಟ್ ಧರಿಸಿದ ವ್ಯಕ್ತಿ ಸುಳ್ಳು ಹೇಳಬಾರದು. ಪಾಪದ ಕೆಲಸ ಮಾಡಬಾರದು. ಮನುಷ್ಯ ಒಂದಲ್ಲ ಒಂದು ಸಮಯದಲ್ಲಿ ಈ ಎಲ್ಲ ಕೆಲಸ ಮಾಡುತ್ತಾನೆ.
ಕೊರಳಿನಲ್ಲಿ ದೇವರನ್ನು ಧರಿಸಿದ ವ್ಯಕ್ತಿ ಗೃಹಜೀವನಕ್ಕೆ ಸಂಬಂಧಿಸಿದ ಯಾವುದೇ ಕೆಲಸವನ್ನು ಮಾಡಲು ಸಾಧ್ಯವಿಲ್ಲ. ಹಾಗೆ ಮಾಡಿದಲ್ಲಿ ಗ್ರಹಗಳು ಅದರಿಂದ ಪ್ರಭಾವಿತವಾಗಿರುತ್ತದೆ.
ಪಿರಿಯಡ್ಸ್ ಆಗುವ ಮಹಿಳೆಯರು ಯಾವುದೇ ದೇವರ ಲಾಕೆಟನ್ನು ಧರಿಸಬಾರದು ಎಂದು ವಾಸ್ತು ಶಾಸ್ತ್ರದಲ್ಲಿ ಹೇಳಲಾಗಿದೆ. ಇದ್ರಿಂದ ಗ್ರಹದೋಷವುಂಟಾಗುತ್ತದೆ. ಅನಾರೋಗ್ಯ ಕಾಡುತ್ತದೆ. ಸಕಾರಾತ್ಮಕ ಶಕ್ತಿಯ ನಾಶವಾಗುತ್ತದೆ.