ಕಳೆದ ಒಂದು ವರ್ಷದಿಂದ ದೇಶದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಏರುಮುಖ ಆಗುತ್ತಲೇ ಇದೆ. ಈಗಾಗಲೇ ಸಾರ್ವಕಾಲಿಕ ದಾಖಲೆ ಬೆಲೆಯನ್ನು ಇಂಧನಗಳು ತಲುಪಿವೆ.
ಪ್ರಮುಖವಾಗಿ ಪೆಟ್ರೋಲ್ 100 ರೂ. ಗಡಿ ದಾಟಿ ತಿಂಗಳುಗಳೇ ಕಳೆದಿದ್ದು, ಜನರು ಕೂಡ ಇಳಿಕೆಯ ಆಸೆಯನ್ನು ಕೈಚೆಲ್ಲಿ ಬಿಟ್ಟಿದ್ದಾರೆ.
ಇದೇ ಕಾಲಘಟ್ಟದಲ್ಲಿ ದ್ವಿಚಕ್ರ ವಾಹನ ಸವಾರರು ತೀವ್ರವಾಗಿ ಪರದಾಡುತ್ತಿದ್ದಾರೆ. ನಿತ್ಯ ಸಂಚಾರಕ್ಕೆ ಪೆಟ್ರೋಲ್ ಹೊಂದಿಸಲಾಗದೆಯೇ ಹಲವಾರು ಮಂದಿ ಪರ್ಯಾಯ ಇಂಧನವಾದ ‘ಎಲೆಕ್ಟ್ರಿಕ್ ಸ್ಕೂಟರ್’ ಗಳತ್ತ ಮುಖ ಮಾಡುತ್ತಿದ್ದಾರೆ. ಸದ್ಯ ದೇಶದಲ್ಲಿ ಎಲೆಕ್ಟ್ರಿಕ್ ವೆಹಿಕಲ್ (ಇವಿ) ಉದ್ದಿಮೆ ಕೂಡ ಭಾರಿ ಮುನ್ನಡೆ ಕಾಣುತ್ತಿದೆ. ಅನೇಕ ಸ್ಟಾರ್ಟಪ್‌ಗಳು ಇವಿ ವಾಹನಗಳ ತಯಾರಿಕೆಯಲ್ಲಿ ನಿರತವಾಗಿದೆ. ಕೇಂದ್ರ ಸರಕಾರದಿಂದ ಪ್ರೋತ್ಸಾಹ ಧನ ಕೂಡ ಈ ವಾಹನಗಳಿಗೆ ಲಭ್ಯವಿದೆ.
ಎಲ್ಲ ಕಾರ್ಮಿಕರಿಗೆ ಗುಡ್ ನ್ಯೂಸ್: ವೇತನ ಪರಿಷ್ಕರಣೆ, ಸಕ್ಕರೆ ಉದ್ದಿಮೆ ಕಾರ್ಮಿಕರಿಗೆ ಪರಿಹಾರದ ಭರವಸೆ
ಮಾರುಕಟ್ಟೆಯಲ್ಲಿ ಲಭ್ಯವಿರುವ ಉತ್ತಮ ಇವಿ ಸ್ಕೂಟರ್‌ಗಳ ಬೆಲೆ ಕನಿಷ್ಠ 90,000 ರೂ.ನಿಂದ 1.30 ಲಕ್ಷ ರೂ.ವರೆಗೆ ಇದೆ. ಇದು ಸದ್ಯದ ಮಟ್ಟಿಗೆ ಗ್ರಾಹಕರ ಜೇಬಿಗೆ ದೊಡ್ಡ ಮಟ್ಟದ ಹೊರೆಯೇ ಆಗಿದೆ. ಬಹುನಿರೀಕ್ಷಿತ ಓಲಾ ಎಸ್1, ಎಸ್1 ಪ್ರೋ ಸ್ಕೂಟರ್‌ಗಳು ರಸ್ತೆಗಿಳಿದಲ್ಲಿ ಅವುಗಳು ನೀಡುವ ಹೆಚ್ಚು ಮೈಲೇಜ್‌ಗಳಿಂದ (ಕಂಪನಿ ಹೇಳಿಕೊಂಡಿರುವಂತೆ) ಜನರು ಮತ್ತಷ್ಟು ಆಕರ್ಷಿತರಾಗುವ ಲೆಕ್ಕಾಚಾರ ಮಾರುಕಟ್ಟೆಯಲ್ಲಿದೆ. ಅದೇ ರೀತಿ ಸಿಂಪಲ್ ಒನ್, ಒಕಿನಾವಾ, ಒಕಾಯಾ, ಅಥೆರ್ ಎನರ್ಜಿ ಸ್ಕೂಟರ್‌ಗಳ ಮೇಲೆಯೂ ಗ್ರಾಹಕರ ಕಣ್ಣಿದೆ.
ಸಂಕ್ರಾಂತಿಗೆ ಜೆಡಿಎಸ್ ಅಭ್ಯರ್ಥಿಗಳ ಮೊದಲ ಪಟ್ಟಿ ಪ್ರಕಟ: HDK ಘೋಷಣೆ
ಮೊದಲ ಬಾರಿಗೆ ಎಲೆಕ್ಟ್ರಿಕ್ ವಾಹನ ಕೊಳ್ಳುವವರು ಮಾಡುವ 1.5 ಲಕ್ಷ ರೂ.ವರೆಗಿನ ಸಾಲಕ್ಕೆ ತೆರಿಗೆ ವಿನಾಯಿತಿಯನ್ನು ಕೂಡ ಕೇಂದ್ರ ಸರಕಾರ ಘೋಷಿಸಿದೆ. ಎಲೆಕ್ಟ್ರಿಕ್ ವಾಹನಗಳ ನೋಂದಣಿ ಪ್ರಮಾಣಪತ್ರ (ಆರ್‌ಸಿ) ಮತ್ತು ಅದರ ಮರುನವೀಕರಣದ ಮೇಲಿನ ಶುಲ್ಕವನ್ನು ಕೂಡ ರಸ್ತೆ ಸಾರಿಗೆ ಸಚಿವಾಲಯವು ಮಾಫಿ ಮಾಡಿದೆ. ಎಲೆಕ್ಟ್ರಿಕ್ ಕಾರುಗಳು ಕೂಡ ಈಗಾಗಲೇ ಮಾರುಕಟ್ಟೆಗೆ ಲಗ್ಗೆ ಇಟ್ಟಿದ್ದು, ಬೆಲೆ ಸ್ವಲ್ಪ ಹೆಚ್ಚಾದರೂ ಭವಿಷ್ಯದಲ್ಲಿ ಇಂಧನದ ಮೇಲಿನ ಅವಲಂಬನೆಯನ್ನು ಪರಿಣಾಮಕಾರಿಯಾಗಿ ಇಳಿಸಲಿದೆ.